HEALTH TIPS

ಇದು ಸೇವೆಯೇ ಹೊರತು ರಾಜಕೀಯವಲ್ಲ: ಕೊರೋನಾ ಕೇಂದ್ರದಲ್ಲಿ ಸ್ವಯಂಸೇವಕನಾಗಿರುವ ಪುತ್ರನ ಬಗ್ಗೆ ಹೆಮ್ಮೆಯಿಂದ ನೆನಪಿಸಿದ ಶಬರಿಮಲೆಯ ಮಾಜಿ ಮೇಲ್ಶಾಂತಿ

                                             

                   ಪತ್ತನಂತಿಟ್ಟು: ಕೊರೋನದ ಎರಡನೇ ತರಂಗದಿಂದ ಉಂಟಾದ ಕಳವಳಗಳು ಸಣ್ಣದಲ್ಲ ಎಂದು ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಾನದ ಮಾಜಿ ಮೇಲ್ಶಾಂತಿ ನಾರಾಯಣನ್ ನಂಬೂದಿರಿ ಹೇಳಿರುವರು. ಸ್ವಯಂಸೇವಕನಾಗಿ ಕೊರೋನಾ ಕೇಂದ್ರಕ್ಕೆ ತೆರಳಿರುವ ಅವರ ಪುತ್ರನನ್ನು ನೆನಪಿಸಿ ನಾರಾಯಣನ್ ನಂಬೂದಿರಿಯ ಮಾತುಗಳು ಅಕ್ಷರ ರೂಪ ಪಡೆದಿವೆ. ತನ್ನ ಮಗನ ಜೀವನವು ಕೊರೋನಾ ರೋಗಿಗಳೊಂದಿಗೆ ಸೇವಾ ಕೈಕಂರ್ಯದಲ್ಲಿರುವುಉದ ಹೆಮ್ಮೆ ತರಿಸಿದೆ. ಆತನ ಸೇವಾ ತತ್ಪರತೆ ಶ್ರೇಷ್ಠವಾದುದು. ಹೆಮ್ಮೆಪಡುತ್ತೇನೆ, ದುಃಖವಾಗಿದ್ದರೂ ಸಹ ಎಂದು ಫೇಸ್‍ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವರು. 

          ಕೊರೋನಾ ರೋಗಿಗಳಿಗಾಗಿ ಸಾಕಷ್ಟು ಯುವಕರು ಮನೆ ಬಿಟ್ಟು ತಮ್ಮ ಪುತ್ರನೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ನಾರಾಯಣನ್ ನಂಬೂದಿರಿ ಹೇಳುತ್ತಾರೆ. ಸೇವಾಭಾರತಿ ಇಂತಹದೊಂದು ಮಹಾನ್ ಅವಕಾಶ ಒದಗಿಸಿತು. ಸೇವಾ ಭಾರತಿ ಎಂಬ ಏಕೈಕ ಕಾರಣಕ್ಕಾಗಿ, ಯಾವುದೇ ಮಾಧ್ಯಮಗಳು ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದಿಲ್ಲ ಮತ್ತು ಯಾರೂ ಹಾರೈಕೆಯ ನುಡಿಗಳನ್ನೂ ಆಡುತ್ತಿಲ್ಲ ಎಂದು ಅವರು ಹೇಳುತ್ತಾರೆ. ಸೇವಾಭಾರತಿಯು ರಾಜಕೀಯ ಪಕ್ಷವಲ್ಲ. ಆದರೆ ಅವರ ಸೇವೆ ಪ್ರಚಾರದಲ್ಲಿಲ್ಲ.ನಾವು ಗುರುತಿಸಬೇಕು ಎಂದು ನಾರಾಯಣನ್ ನಂಬೂದಿರಿ ಅಭಿಪ್ರಾಯಪಟ್ಟಿದ್ದಾರೆ.

                               ಟಿಪ್ಪಣಿಯ ಪೂರ್ಣ ಆವೃತ್ತಿ:

            ಕೋವಿಡ್‍ನ ಎರಡನೇ ತರಂಗದಿಂದ ಸೃಷ್ಟಿಯಾದ ಭಯಗಳು ಸಣ್ಣದಲ್ಲ. ನಾವೆಲ್ಲರೂ ನಾವೇ ಸುರಕ್ಷಿತವಾಗಿರಲು ಪ್ರಯತ್ನಿಸುತ್ತೇವೆ. ಆಸ್ಪತ್ರೆಗಳಲ್ಲಿನ ದುಃಖ ಮತ್ತು ಮರಣದಿಂದ ಯಾರೂ ಹೆದರಿದಂತಿಲ್ಲ.  ಸೋಮ ಮನೆ ಬಿಟ್ಟು ಹತ್ತು ದಿನಗಳು ಕಳೆದಿವೆ. ಅಧ್ಯಯನ ಅಥವಾ ಕೆಲಸಕ್ಕಾಗಿ ಅಲ್ಲ. ಆತ ಕೋಥಮಂಗಲಂನ ಕೋವಿಡ್ ಕೇಂದ್ರದಲ್ಲಿ ಸ್ವಯಂಸೇವಕರಾಗಿದ್ದಾನೆ. ಕೋವಿಡ್ ರೋಗಿಗಳೊಂದಿಗೆ ಜೀವನ. ಪ್ರತಿದಿನ ಕರೆ ಮಾಡುತ್ತಾನೆ. ಪಿಪಿಇ ಕಿಟ್ ಮತ್ತು ಫೇಸ್ ಶೀಲ್ಡ್ ಅನ್ನು ಬಳಸುತ್ತಾನೆ. ಅದು ಏನೇ ಇರಲಿ ಅದು ಅಪಾಯವೂ ಹೌದು. ನೋಡಲು ಚೆನ್ನಾಗಿ ಅನಿಸುತ್ತದೆ. ಆದರೆ ಅವನು ಏನು ಮಾಡುತ್ತಿದ್ದನೆಂಬುದರ ಹಿರಿಮೆಯನ್ನು ನೆನಪಿಸಿಕೊಳ್ಳುವುದರಿಂದ ಏನೂ ಹೇಳಲಾಗುವುದಿಲ್ಲ.

        ಅವನಷ್ಟೇ ಅಲ್ಲ, ಅವನಂತಹ ಸಾಕಷ್ಟು ಯುವಕರು ಮನೆ ಮತ್ತು ಕುಟುಂಬವನ್ನು ತೊರೆದು ಕೋವಿಡ್ ರೋಗಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಸೇವಾಭಾರತಿ ಅಂತಹ ಸೌಲಭ್ಯವನ್ನು ಒದಗಸಿದೆ. ಸರ್ಕಾರೇತರ ಕೋವಿಡ್ ಕೇಂದ್ರಗಳು ಸಹ ಕಾರ್ಯನಿರ್ವಹಿಸುತ್ತಿವೆ ಎಂದು ಈಗ ತಿಳಿದುಬಂದಿದೆ. ಇಲ್ಲಿ ಹದಿನೈದು ರೋಗಿಗಳಿದ್ದಾರೆ.

          ಒಂದು ವಿಷಯ ಖಚಿತ, ಸೇವಾಭಾರತಿಯ ಚಟುವಟಿಕೆಗಳಿಗೆ ಗಮನ ಕೊಡುವುದಿಲ್ಲ. ಯಾರೂ ಹಾರೈಸುವುದಿಲ್ಲ. ಕಳೆದ ಪ್ರವಾಹದ ಸಮಯದಲ್ಲಿ ಇದೇ ಘಟಿಸಿರುವುದು. 

ಸೇವಾ ಭಾರತಿ ರಾಜಕೀಯ ಪಕ್ಷವಲಲ್. ಅದೊಂದು ಸೇವಾ ಪ್ರಕಲ್ಪ. ಈ ಕೆಟ್ಟ ಕಾಲದಲ್ಲಿ ತನ್ನ ಮಗ ತುಂಬಾ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರೂ ಸಹ ಏನನ್ನೂ ಹೇಳುವಂತಿಲ್ಲ.  22 ವರ್ಷದ ಪುತ್ರ ಸಮುದಾಯಕ್ಕೆ ಸದಾ ಬದ್ಧರಾಗಿದ್ದಾನೆಂಬುದು ಭಾವಿಸಲು ಹರ್ಷಿಸುತ್ತೇನೆ. ಸಮಾಜದ ಬಗ್ಗೆ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ಜನರಿರಬೇಕು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries