HEALTH TIPS

ಕೊರೋನಾ-ವಹಿವಾಟು ತಾತ್ಕಾಲಿಕ ಸ್ಥಗಿತಕ್ಕೆ ಕ್ಯಾಂಪ್ಕೋ ಸಂಸ್ಥೆ ತೀರ್ಮಾನ

                                       

       ಮಂಗಳೂರು: ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಕ್ಯಾಂಪೆÇ್ಕ ತನ್ನ ಸದಸ್ಯರ ಮತ್ತು ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ರೋಗ ಹರಡುವಿಕೆಯ ನಿಯಂತ್ರಣಕ್ಕಾಗಿ ಸರ್ಕಾರದ ಪ್ರಯತ್ನವನ್ನು ಬೆಂಬಲಿಸಿ, ತಾತ್ಕಾಲಿಕವಾಗಿ ತನ್ನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮೇ 11ರಿಂದ(ಇಂದಿನಿಂದ) 15ರ ವರೆಗೆ ಎರಡೂ ರಾಜ್ಯಗಳಲ್ಲಿ ಸಂಸ್ಥೆಯ ಯಾವುದೇ ಶಾಖೆಗಳಲ್ಲಿ ಸರಕು ಖರೀದಿ ಸಹಿತ ಯಾವುದೇ ವಹಿವಾಟುಗಳು

          ನಡೆಯುವುದಿಲ್ಲ. ಇದಲ್ಲದೆ, ಅಧ್ಯಯನದ ಪ್ರಕಾರ ಅಡಕೆ ಗ್ರಾಹಕ ಮಾರುಕಟ್ಟೆಯಲ್ಲಿನ ಬೇಡಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿರುವುದರಿಂದ, ಅಡಕೆಯ ದರದ ಬಗ್ಗೆ ಬೆಳೆಗಾರರು ಯಾವುದೇ ಆತಂಕ ಪಡಬೇಕಾಗಿಲ್ಲ. ಮಾರುಕಟ್ಟೆಯನ್ನು ಬುಡಮೇಲುಗೊಳಿಸುವ ಯಾವುದೇ ಹುನ್ನಾರಗಳನ್ನು ಕ್ಯಾಂಪೆÇ್ಕ ಖಂಡಿಸುತ್ತದೆ. ಅಡಕೆ ಬೆಳೆಗಾರರು ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಯಾವುದೇ ವದಂತಿಗಳಿಗೆ ಸೊಪ್ಪುಹಾಕದೇ, ಸಹನೆಯನ್ನು ಕಾಯ್ದುಕೊಳ್ಳಬೇಕಾಗಿ ಸಂಸ್ಥೆಯ ಅಧ್ಯಕ್ಷರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿಕೊಂಡು ಸರ್ಕಾರದ ನಡೆಗಳ ಅನುಸಾರ ಖರೀದಿ ಪ್ರಕ್ರಿಯೆಯನ್ನು ಪುನರಾರಂಭಿಸಲಿರುವುದಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries