HEALTH TIPS

ವಿಶ್ವದ ಅತಿದೊಡ್ಡ ಆಮೆ ಮೊಟ್ಟೆಯೊಡೆಯಿತು: ಮರಿಗಳನ್ನು ಕಾಸರಗೋಡು ಪಯಸ್ವಿನಿ ನದಿಗೆ ಬಿಟ್ಟ ಪರಿಸರ ಪ್ರೇಮಿ

 

                 ಕಾಸರಗೋಡು: ವಿಶ್ವದ ಅತಿದೊಡ್ಡ ಆಮೆ ಹುಡುಕಿಕೊಂಡು ಕೇರಳಕ್ಕೆ ಬಂದ ಆಯುಶಿ ಜೈನ್ ಮತ್ತು ಉತ್ತರ ಪ್ರದೇಶದ ಆಕೆಯ ಸ್ನೇಹಿತರಿಗೆ ನಿರೀಕ್ಷೆ ಹುಸಿಯಾಗಲಿಲ್ಲ.  ವಿಶ್ವದ ಅತಿದೊಡ್ಡ ಆಮೆಗಳಲ್ಲಿ ಒಂದಾದ ಜೈಂಟ್ ಸಾಫ್ಟ್ ಶೆಲ್ ಆಮೆಯ ಮೊಟ್ಟೆಗಳು ಕಾಸರಗೋಡು ಪಯಸ್ವಿನಿ ನದಿಯಲ್ಲಿ ಕಂಡುಬಂದಿವೆ. ಮೊಟ್ಟೆಗಳನ್ನು ಕೆಲವು ದಿನ ಕಾಪಿಟ್ಟು ಬಳಿಕ ಮೊಟ್ಟೆಗಳು ಬಿರಿದ ಬಳಿಕ ಆಯುಶಿ ಮತ್ತು ಅವನ ತಂಡ ನದಿಗೆ ಮರಿಗಳನ್ನು ಬಿಟ್ಟಿರುವರು. 

                     ಆಯುಶಿ ಉತ್ತರ ಪ್ರದೇಶದ ಆಗ್ರಾ ಮೂಲದವರು. ಆಮೆಯ ಮೊಟ್ಟೆಗಳನ್ನು ಆಯುಶಿ ಮತ್ತು ಸ್ಥಳೀಯ ಕೃಷಿಕರಾದ  ಅಬ್ದುಲ್ಲಕುಂಞÂ್ಞ ಪತ್ತೆ ಮಾಡಿದ್ದರು. ಆಯುಷಿ ದೈತ್ಯ ಆಮೆ ಹುಡುಕಿಕೊಂಡು ಕಾಸರಗೋಡಿಗೆ ಕೆಲವು ವಾರಗಳ ಹಿಂದೆಯಷ್ಟೇ ಆಗಮಿಸಿದ್ದರು. ಅವರು ಎರಡು ವರ್ಷಗಳಿಂದ ಕೇರಳದ ವಿವಿಧ ಜಿಲ್ಲೆಗಳಲ್ಲಿ ದೈತ್ಯ ಆಮೆಗಾಗಿ ಹುಡುಕಾಟದಲ್ಲಿದ್ದರು. ಕಳೆದ 45 ವರ್ಷಗಳಲ್ಲಿ ಭಾರತದಲ್ಲಿ ಕೇವಲ 15 ದೈತ್ಯ ಆಮೆಗಳು ಅರಣ್ಯದಲ್ಲಿರುವುದು ಕಂಡುಬಂದಿದೆ. ಈ ಪೈಕಿ ಕೊನೆಯದಾಗಿ ಕೋಝಿಕ್ಕೋಡಿನಲ್ಲ್ಲಿ ದೈತ್ಯ ಆಮೆಗಳನ್ನು ಪತ್ತೆಹಚ್ಚಲಾಗಿತ್ತು. 

             ಅಬ್ದುಲ್ಲಕುಂಞÂ ಪಯಸ್ವಿನಿಯ ನದೀ ತಟ ಹಾದುಹೋಗುವ ಕುಟ್ಟಿಯಾನಂನಿಂದ ದೈತ್ಯ ಆಮೆಯ ಮೊಟ್ಟೆಗಳನ್ನು ಪತ್ತೆಹಚ್ಚಿದ್ದರು. ಈ ಹಿಂದೆ ದೈತ್ಯ ಆಮೆಯ ಹುಡುಕಾಟದಲ್ಲಿ ಕೇರಳದಾದ್ಯಂತ ಪ್ರಯಾಣಿಸಿದ್ದ ಆಯುಷಿ ಜೈನ್‍ನ ದೈತ್ಯ ಆಮೆಯ ಮೊಟ್ಟೆ ಇದಾಗಿರಬಹುದು ಎಂದು ಅಬ್ದುಲ್ಲಕುಂಞÂ ಅರಿತುಕೊಂಡರು. ಈ ಬಗ್ಗೆ  ಅರಣ್ಯ ಇಲಾಖೆ ಮತ್ತು ಆಯುಷ್‍ಗೆ ಮಾಹಿತಿ ನೀಡಲಾಯಿತು. ಆಮೆ ಪೂರ್ಣ ಬೆಳವಣಿಗೆಯನ್ನು ತಲುಪಿದಾಗ, ಅದು ಒಂದು ಮೀಟರ್ ಉದ್ದ ಮತ್ತು 100 ಕೆಜಿ ವರೆಗೆ ತೂಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries