ಕೊಚ್ಚಿ: ಕೊರೋನಾ ಚಿಕಿತ್ಸೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ ವಿರುದ್ಧ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚಿಕಿತ್ಸೆಯ ವೆಚ್ಚವನ್ನು ಏಕೀಕರಿಸಲು ಸರ್ಕಾರ ನಿರ್ಧರಿಸಿದೆ. ಈ ಆದೇಶವು ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ನಸಿರ್ಂಗ್ ಹೋಂಗಳಿಗೆ ಅನ್ವಯಿಸುತ್ತದೆ. ದರಗಳನ್ನು ಏಕೀಕರಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ಸೋಮವಾರ ಮಾಹಿತಿ ನೀಡಿದೆ.
ಸಾಮಾನ್ಯ ವಾರ್ಡ್‍ಗಳಲ್ಲಿ ಎಲ್ಲಾ ಶುಲ್ಕಗಳು ಸೇರಿದಂತೆ ಗರಿಷ್ಠ ಶುಲ್ಕ 2645 ರೂ. ಮಾತ್ರ ಕೋವಿಡ್ ಪೀಡಿತರಿಂದ ವಸೂಲು ಮಾಡಲು ಸರ್ಕಾರ ಆಧೇಶಿಸಿದೆ. ಸಿಟಿ ಸ್ಕ್ಯಾನ್‍ನಂತಹ ಹೆಚ್ಚುವರಿ ಪರೀಕ್ಷೆಗಳಿಗೆ ಶುಲ್ಕ ವಿಧಿಸಬಹುದು. ಸಾಮಾನ್ಯ ವಾರ್ಡ್‍ಗಳಲ್ಲಿನ ರೋಗಿಗಳಿಗೆ ದಿನಕ್ಕೆ ಎರಡು ಪಿಪಿಇ ಕಿಟ್‍ಗಳನ್ನು ಮಾತ್ರ ವಿಧಿಸಬೇಕು ಮತ್ತು ಐಸಿಯು ರೋಗಿಗಳಿಗೆ ದಿನಕ್ಕೆ ಐದು ಪಿಪಿಇ ಕಿಟ್‍ಗಳನ್ನು ವಿಧಿಸಬೇಕು. ಇದು ಮಾರುಕಟ್ಟೆ ಎಂಆರ್‍ಪಿ ಬೆಲೆಗಿಂತ ಒಂದು ರೂ. ಕೂಡಾ ಮೀರಬಾರದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿರುವುದು ಗಮನಕ್ಕೆ ಬಂದಲ್ಲಿ ಡಿಎಂಒ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ದೂರು ನೀಡಬಹುದು. ಖಾಸಗಿ ಆಸ್ಪತ್ರೆಗಳು ಎಷ್ಟು ದುಬಾರಿ ಬಿಲ್ ವಿಧಿಸುತ್ತದೋ ಅದರ ಹತ್ತು ಪಟ್ಟು ಹೆಚ್ಚು ದಂಡ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.



