ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ವೆಂಟಿಲೇಟರ್‍ಗಳ ಸಹಾಯದಿಂದ 1,249 ಜನರನ್ನು ಜೀವಂತವಾಗಿರಿಸಲಾಗಿದೆ. 2528 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಳಗೊಂಡಂತೆ, ಮುಂದಿನ ದಿನಗಳಲ್ಲಿ ಐಸಿಯು ಮತ್ತು ವೆಂಟಿಲೇಟರ್ ಕೊರತೆ ಉಲ್ಬಣಗೊಳ್ಳುವ ಎಂಬ ಆತಂಕವಿದೆ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 2,857 ಐಸಿಯು ಹಾಸಿಗೆಗಳು ಮತ್ತು 2,293 ವೆಂಟಿಲೇಟರ್ಗಳಿವೆ.
ಕಳೆದ ಐದು ದಿನಗಳಿಂದ ವೆಂಟಿಲೇಟರ್ ನೆರವು ಪಡೆದ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಐಸಿಯು ಕೊರತೆಯಿಂದಾಗಿ ಸರಿಯಾದ ಚಿಕಿತ್ಸೆಯನ್ನು ಪಡೆಯದ ಅನೇಕ ಗಂಭೀರ ರೋಗಿಗಳೂ ಇದ್ದಾರೆ. ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಸಮಿತಿಯು ಅವುಗಳನ್ನು ದೃಢೀಕರಿಸಲು ತಡವಾಗಿರುವುದರಿಂದ ಇವು ದೈನಂದಿನ ಅಂಕಿ ಅಂಶಗಳಲ್ಲಿ ಸ್ಪಷ್ಟವಾಗಿಲ್ಲ.



