ಕಾಸರಗೋಡು: ಕಾಸರಗೋಡು ಜಿಲ್ಲೆಯ ಆಕ್ಸಿಜನ್ ಸಂಗ್ರಹ, ಅದರ ಬಳಕೆ ಇತ್ಯಾದಿಗಳ ಮೇಲ್ನೋಟ, ನಿಗಾ ಅಂಗವಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ.
ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಿಗೆ ಆಕ್ಸಿಜನ್ ಯಾವುದೇ ತಡೆಯಿಲ್ಲದೆ ತಲಪಿಸುವ ನಿಟ್ಟಿನಲ್ಲಿ ಆಕ್ಸಿಜನ್ ವಾರ್ ರೂಂ ಸಜ್ಜುಗೊಂಡಿದೆ. ಕಾಞಂಗಾಡ್ ವಿಜ್ಞಾನ ಉದ್ಯಾನ(ಸಯನ್ಸ್ ಪಾರ್ಕ್)ದ ಡಿ.ಪಿ.ಎಂ.ಎಸ್.ಯೂನಿಟ್ ನ 24 ತಾಸುಗಳೂ ಆಕ್ಸಿಜನ್ ವಾರ್ ರೂಂ ಚಟುವಟಿಕೆ ನಡೆಸಲಿದೆ ಎಂದು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರದ ಅಧ್ಯಕ್ಷರಾಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ.
ಜಿಲ್ಲಾ ಮಟ್ಟದ ಸಮಿತಿಯಲ್ಲಿ ಹೆಚ್ಚುವರಿ ದಂಡನಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಉದ್ದಿಮೆ ಕೇಂದ್ರ ಪ್ರಬಂಧಕ ಇರುವರು. ಈ ಸದಸ್ಯರೂ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ವಲಯ ಕಂದಾಯ ಅಧಿಕಾರಿ ವಾರ್ ರೂಂನ ನೋಡೆಲ್ ಅಧಿಕಾರಿಗಳಾಗಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿ ವಾರ್ಡ್ ರೂಂನ ಸುಗಮ ಚಟುವಟಿಕೆಗಳಿಗೆ ಬೇಕಿರುವ ಸಜ್ಜೀಕರಣ ಖಚಿತಪಡಿಸುವರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ವಲಯ ಕಂದಾಯಾಧಿಕಾರಿ ಸಿಬ್ಬಂದಿಯ ನೇಮಕ ನಡೆಸುವರು. ಡಾಟಾ ಎಂಟ್ರಿಗೆ ಬೇಕಿರುವ ಶಿಕ್ಷಕರನ್ನು ಡಿ.ಡಿ.ಇ. ನೇಮಿಸುವರು.


