ತಿರುವನಂತಪುರ: ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಕ್ಯಾಚ್ ದಿ ರೇನ್ ಯೋಜನೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಮಲೆಯಾಳ ಚಿತ್ರ ತಾರೆ ಮೋಹನ್ ಲಾಲ್ ಕರೆ ನೀಡಿದ್ದಾರೆ. ಅವರು ಯೋಜನೆಯ ಯಶಸ್ವಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ತಮ್ಮ ಫೇಸ್‍ಬುಕ್‍ನಲ್ಲಿ ಕರೆ ನೀಡಿರುವರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಂದೇಶವನ್ನು ಅವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊ 1 ನಿಮಿಷ 6 ಸೆಕೆಂಡುಗಳಷ್ಟು ವಿಸ್ತಾರವಾಗಿದೆ. ನೀರು ಜೀವನ. ಆದ್ದರಿಂದ, ಪ್ರತಿ ಹನಿ ಅಮೂಲ್ಯವಾಗಿದೆ. ಇಂದು ಬದುಕಲು ಮತ್ತು ನಾಳೆಯೂ ಬದುಕಲು ನೀರು ಬೇಕು ಎಂದು ವಿಡಿಯೋ ಸಂದೇಶದಲ್ಲಿ ಬರೆದಿರುವ ಮೋಹನ್ ಲಾಲ್, ಕ್ಯಾಚ್ ದಿ ರೈನ್-ವೇರ್ ಇಟ್ ಫಾಲ್ಸ್, ವೆನ್ ಇಟ್ ಫಾಲ್ಸ್ ಎಂದಿರುವರು. ಜಾಗತಿಕ ತಾಪಮಾನ ಏರಿಕೆಯ ಸವಾಲುಗಳನ್ನು ಎದುರಿಸುವಾಗ ಕೃಷಿ ಮತ್ತು ಕುಡಿಯುವ ನೀರಿನ ಜೀವನಾಳವನ್ನು ಉಳಿಸಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ ಭರವಸೆಯ ಅಭಿಯಾನವಾಗಿದೆ ಎಂದೂ ಉಲ್ಲೇಖಿಸಿರುವರು.
ವ್ಯರ್ಥವಾಗುವ ಮಳೆನೀರನ್ನು ಸಂಗ್ರಹಿಸಲು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪೆÇ್ರೀತ್ಸಾಹಿಸುವ ರಾಷ್ಟ್ರೀಯ ಜಲ ಆಯೋಗದ ದೀರ್ಘಕಾಲೀನ ಕಾರ್ಯಕ್ರಮವು ಈಗಾಗಲೇ ಉತ್ತಮ ಗಮನ ಮತ್ತು ಸ್ವೀಕಾರವನ್ನು ಪಡೆದಿದೆ. ಭವಿಷ್ಯದಲ್ಲಿ ನೀರನ್ನು ಭಾರತದಲ್ಲಿ ಶ್ರೀಮಂತವಾಗಿಸಲು ಈ ಕಾರ್ಯಕ್ರಮವನ್ನು ನಮ್ಮದೇ ಆದ ರೀತಿಯಲ್ಲಿ ಅನುಷ್ಠಾನಗೊಳಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬಹುದು. ಇತರರು ಜೊತೆಯಾಗಬಹುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.


