HEALTH TIPS

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ; ಆರ್.ಎಸ್.ಎಸ್. ಕಾರ್ಯಕರ್ತರ ತ್ಯಾಗದ ಕಥೆ; "21 ತಿಂಗಳ ನರಕ" ಸಾಕ್ಷ್ಯಚಿತ್ರ ಒಟಿಟಿಯಲ್ಲಿ ಬಿಡುಗಡೆ

                                                         

                       ಕೊಚ್ಚಿ: ತುರ್ತು ಪರಿಸ್ಥಿತಿಯ ಕರಾಳತೆಯನ್ನು ಬಿಂಬಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೋರಾಟದ ಕಥೆಯನ್ನು ಹೇಳುವ "21 ತಿಂಗಳ ನರಕ" ಸಾಕ್ಷ್ಯಚಿತ್ರ ಜೂನ್ 10 ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುವುದು. ಒಟಿಟಿ ಪ್ಲಾಟ್‍ಫಾರ್ಮ್ ಲೈಮ್ ಲೈಟ್ ಮೀಡಿಯಾದಲ್ಲಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗುವುದು. ತುರ್ತು ಪರಿಸ್ಥಿತಿಯ ವಿರುದ್ಧ ಸತ್ಯಾಗ್ರಹ ಚಳವಳಿಯನ್ನು ಮುನ್ನಡೆಸಿದ ಆರ್‍ಎಸ್‍ಎಸ್ ಕಾರ್ಯಕರ್ತರು ಅನುಭವಿಸಿದ ದೌರ್ಜನ್ಯ ಮತ್ತು ತ್ಯಾಗಗಳನ್ನು 21 ತಿಂಗಳ ನರಕ ಎಂಬ ಕಥಾನಕದ ಮೂಲಕ ಚಿತ್ರಿಸಲಾಗಿದೆ.

                    ಈ ಸಾಕ್ಷ್ಯಚಿತ್ರವನ್ನು ಯದು ವಿಜಯಕೃಷ್ಣನ್ ಪರಮೇಶ್ವರನ್ ಅವರು ಎರಿಸ್ ಮೀಡಿಯಾ ನೆಟ್‍ವರ್ಕ್ ಬ್ಯಾನರ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ಸಾಕ್ಷ್ಯಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಅನುಮತಿ ನಿರಾಕರಣೆ ವಿವಾದಾತ್ಮಕವಾಗಿತ್ತು. ಸಾಕ್ಷ್ಯಚಿತ್ರವು ತುರ್ತು ಪರಿಸ್ಥಿತಿ ಸಂದರ್ಭ ನಡೆದ ಚಿತ್ರಹಿಂಸೆಗಳನ್ನು ದಾಖಲಿಸಿದೆ. ಆದರೆ, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ. ಪರಿಷ್ಕರಣೆ ಸಮಿತಿಗೆ ಕಳುಹಿಸಿದ ನಂತರ ಸಾಕ್ಷ್ಯಚಿತ್ರವನ್ನು ಅನುಮೋದಿಸಲಾಯಿತು.


                    ತುರ್ತು ಪರಿಸ್ಥಿತಿ 1975ರ  ಜೂನ್ 25, ರಂದು ಅಂದಿನ ಕಾಂಗ್ರೆಸ್ಸ್ ನೇತೃತ್ವದ ಇಂದಿರಾ ಗಾಂಧಿ ಸರ್ಕಾರ ಘೋಷಿಸಿತ್ತು. ಆರ್‍ಎಸ್‍ಎಸ್, ಜನ ಸಂಘ ಮತ್ತು ಜನತಾ ಪಕ್ಷದ ಕಾರ್ಯಕರ್ತರ ವೀರ ಹೋರಾಟವೇ ನಂತರ ಪ್ರಜಾಪ್ರಭುತ್ವದ ಪುನಃಸ್ಥಾಪನೆಗೆ ಕಾರಣವಾಯಿತು. ಕೆ.ಕರುಣಾಕರನ್ ನೇತೃತ್ವದಲ್ಲಿ ಕೇರಳದಲ್ಲಿ ನಡೆದ ಕ್ರೂರ ಆಡಳಿತದ ಅವಧಿಯಲ್ಲಿ ಸತ್ಯಾಗ್ರಹವನ್ನು ಮಾಡಿದ ಅನೇಕ ಸ್ವಯಂಸೇವಕರು ಸಾವನ್ನಪ್ಪಿದ್ದರು.  https://youtu.be/vSV_rz2slyk

https://youtu.be/vSV_rz2slyk

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries