HEALTH TIPS

'ಏಕಕಾಲದಲ್ಲಿ ಪ್ಲಸ್ ವನ್ ಮತ್ತು ಪ್ಲಸ್ ಟೂ ಅಧ್ಯಯನ: ಸೆಪ್ಟೆಂಬರ್‍ನಲ್ಲಿ ಪ್ಲಸ್ ವನ್ ಸಾಮಾನ್ಯ ಪರೀಕ್ಷೆ: ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸಾರ್ವಜನಿಕ ಪರೀಕ್ಷೆಯನ್ನು ಅನಗತ್ಯವೆಂದು ಘೋಷಿಸಬೇಕು: ವಿದ್ಯಾರ್ಥಿಗಳಿಂದ ಟ್ವೀಟ್ ಸಮರ

            ತಿರುವನಂತಪುರ : ಕೊರೊನಾ ತಂದಿರುವವ್ಯಾಪಕ ಪ್ರಮಾಣದ ಗೊಂದಲಗಳು ಈಗಲೂ ಮುಮದುವರಿಯುತ್ತಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳ ಕಲಿಕೆಗೆ ಅಸ್ಥಿರತೆ ತಂದೊಡ್ಡಿದೆ. ವಿಶೇಷವೆಂದರೆ ಕಳೆದ ವರ್ಷ ಪ್ಲಸ್ ವನ್ ಕಲಿತ ವಿದ್ಯಾರ್ಥಿಗಳನ್ನು ಮೊದಲಿಗೆ ಯಾವುದೇ ಪರೀಕ್ಷೆಗಳಿಲ್ಲದೆ ಈ ಬಾರಿಯ ಪ್ಲಸ್ ಟು ತರಗತಿಗಳಿಗೆ ಉತ್ತೀರ್ಣಗೊಳಿಸಲಾಗಿದ್ದು, ಆನ್ ಲೈನ್ ತರಗತಿಗಳು ಆರಂಭಗೊಂಡಿದೆ. ಈ ಮಧ್ಯೆ ಪ್ಲಸ್ ಟು ತರಗತಿಗಳು ಆರಂಭಗೊಂಡು ಮೂರು ತಿಂಗಳ ಬಳಿಕ ಪ್ಲಸ್ ವನ್ ಪರೀಕ್ಷೆಗಳನ್ನು ನಡೆಸುವುದಾಗಿ ಈಗ ಸರ್ಕಾರ ಘೋಷಿಸಿದ್ದು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿದೆ.

             ಕಳೆದ ಬಾರಿ ಕೇರಳದಲ್ಲಿ 2020 ರ ನವೆಂಬರ್‍ನಲ್ಲಿ ಪ್ಲಸ್ ಒನ್ ತರಗತಿಗಳು ಪ್ರಾರಂಭವಾದವು. ಕೋವಿಡ್ ವಿಸ್ತರಣೆಯಿಂದ ತಡವಾದ ತರಗತಿಗಳು ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿ ನಡೆಸಲಾಗಿತ್ತು. ಎರಡನೇ ತರಂಗದ ಬಳಿಕ  ಕೋವಿಡ್ ನಿಯಮಗಳ ಅನುಸಾರ ಪ್ಲಸ್ ವನ್ ಪರೀಕ್ಷೆಗಳನ್ನು ನಡೆಸಿರಲಿಲ್ಲ. ಪರೀಕ್ಷೆಯ ಬಗ್ಗೆ ಸರ್ಕಾರದ ಯಾವುದೇ ಪ್ರಕಟಣೆಗಳು ಇರಲಿಲ್ಲ. ಸಂದರ್ಭಗಳನ್ನು ಪರಿಗಣಿಸಿ ಪರೀಕ್ಷೆ ನಡೆಯುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. 

           ಆದರೆ ಹೊಸ ಸರ್ಕಾರ ಮತ್ತು ಶಿಕ್ಷಣ ಸಚಿವರು ಅಧಿಕಾರಕ್ಕೆ ಬಂದಾಗ ನಿರ್ಧಾರ ಬದಲಾಯಿತು. ಮೇ ತಿಂಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೆಪ್ಟೆಂಬರ್‍ನಲ್ಲಿ ಪ್ಲಸ್ ಒನ್ ಸಾಮಾನ್ಯ ಪರೀಕ್ಷೆ ನಡೆಯಲಿದೆ ಎಂದು ಘೋಷಿಸಿದರು. ಪ್ರಸ್ತುತ ಪ್ರತಿಭಟನೆಗೆ ಇದು ಕಾರಣವಾಗಿದೆ.

             ಸಾಮಾನ್ಯ ಪ್ಲಸ್ ವನ್ ಫಲಿತಾಂಶದ ಬಳಿಕ, ವಿದ್ಯಾರ್ಥಿಗಳು ಕಡಿಮೆ ಅಂಕಗಳು ಬಂದ ಮೂರು ವಿಷಯಗಳಲ್ಲಿ ಸುಧಾರಣಾ ಪರೀಕ್ಷೆಗೆ ಹಾಜರಾಗಬಹುದು. ಇದನ್ನು ಈ ವರ್ಷ ಕೈಬಿಡಲಾಗಿದೆ. ಪ್ಲಸ್ ವನ್  ಸಾರ್ವಜನಿಕ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸುವುದರೊಂದಿಗೆ, ಎರಡೂ ಪರೀಕ್ಷೆಗಳ ಆಧಾರದ ಮೇಲೆ ಪ್ಲಸ್ ಟೂ ಪೂರ್ಣ ಫಲಿತಾಂಶವನ್ನು ಘೋಷಿಸಲಾಗುವುದು ಎಮದು ಸರ್ಕಾರ ತಿಳಿಸಿದೆ.

                ಎಂದಿಗೂ ಶಾಲೆಗೆ ನೇರವಾಗಿ ಹೋಗದ ವಿದ್ಯಾರ್ಥಿಗಳಿಗೆ ಸುಧಾರಣೆ ಬರೆಯಲು ಅವಕಾಶವಿಲ್ಲದಿರುವುದು ಸರಿಯಾದ ಕ್ರಮವಲ್ಲ ಎಂದು ವಿದ್ಯಾರ್ಥಿಗಳು ವಾದಿಸುತ್ತಾರೆ.

       "ಅನೇಕ ವಿದ್ಯಾರ್ಥಿಗಳು ಸಿಬಿಎಸ್‍ಇ ಮತ್ತು ಐಸಿಎಸ್‍ಇಇ ಮಂಡಳಿಗಳಿಂದ ಬಂದವರು. ಅವರಿಗೆ ಪರೀಕ್ಷೆಯ ಮಾದರಿ ಕೂಡ ತಿಳಿದಿಲ್ಲ. ಪ್ಲಸ್ ಒನ್ ತರಗತಿಗಳನ್ನು ಇಲ್ಲಿಯವರೆಗೆ ಆನ್‍ಲೈನ್‍ನಲ್ಲಿ ನಡೆಸಲಾಗಿದೆ. ನಾವು ಯುನಿಟ್ ಟೆಸ್ಟ್ ಕೂಡ ಬರೆದಿಲ್ಲ. ಯಾವುದೇ ಮಾದರಿ ಪರೀಕ್ಷೆಗಳೂ ನಡೆಸಿಲ್ಲ. ಎಂದು ಒಬ್ಬ ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ. 

               ಆನ್‍ಲೈನ್ ತರಗತಿಗಳು ಕೇರಳದಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದು ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತ ವಿದ್ಯಾರ್ಥಿಗಳಿಗೆ ಭಾರೀ ಸಮಸ್ಯೆ ಸೃಷ್ಟಿಸಲಿದೆ.  ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪ್ಲಸ್ ವನ್ ನಲ್ಲಿ ವಿಜ್ಞಾನ ವಿಷಯ ಆಯ್ಕೆಮಾಡಿದವರಿಗೆ ಕಳೆದ ಬಾರಿ ನೇರ ತರಗತಿಗಳೂ ಇಲ್ಲದಿದ್ದರಿಂದ ಇಂಗ್ಲೀಷ್ ನ ಹಿಡಿತವಿಲ್ಲದೆ ಭಾರೀ ಹೊಡೆತ ನೀಡಲಿದೆ. 

          ಕೇರಳದ ಶಾಲೆಗಳಲ್ಲಿನ ಐಇಡಿಗಳು (ಮಧ್ಯಂತರ ಸ್ಫೋಟಕ ಅಸ್ವಸ್ಥತೆ) ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಂದ ಹೆಚ್ಚು ಬಳಲುತ್ತಿದ್ದಾರೆ ಎಮದು ಅಧ್ಯಯನವೊಂದು ತಿಳಿಸಿದೆ. ಐಇಡಿ  ಸೌಮ್ಯ ವರ್ತನೆಯ ಸಮಸ್ಯೆಗಳನ್ನು ಹೊಂದಿರುವ ವಿದ್ಯಾರ್ಥಿಗಳು   ಒಂದು ವಿಷಯದ ಬಗ್ಗೆ ಸ್ವಲ್ಪ ಹಿಂದುಳಿದಿರಬಹುದು, ಆದರೆ ಅವರು ಹತ್ತಿರ ಕುಳಿತು ಕಲಿಸಿದರೆ ಚಾಣಾಕ್ಷರು ಎಂಬ ಅಂಶವೂ ಮುಖ್ಯವಾದುದು.  

            ಪ್ಲಸ್ ಟು ವಿದ್ಯಾರ್ಥಿಗಳು ವಿಕ್ಟರ್ಸ್ ಚಾನೆಲ್ ಮತ್ತು ಆನ್‍ಲೈನ್ ತರಗತಿಗಳ ಮೂಲಕ ಅಧ್ಯಯನ ಮಾಡುತ್ತಾರೆ. ಶೈಕ್ಷಣಿಕ ವರ್ಷದಲ್ಲಿ ಒಂದು ದಿನವೂ ಶಾಲೆಗೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ.

ಶಾಲೆಗಳಲ್ಲಿ ಹೆಚ್ಚಿನ ತರಗತಿಗಳು ಪ್ರತಿದಿನ  ಒಂದು ಗಂಟೆಯ ಮೂರು ತರಗತಿಗಳನ್ನು ತೆಗೆದುಕೊಳ್ಳುತ್ತವೆ, ಮತ್ತು ವಿಕ್ಟರ್ಸ್ ಚಾನೆಲ್ ವೀಕ್ಷಿಸುವುದು ಕಡ್ಡಾಯವಾಗಿದೆ ಎಂದು ವಿದ್ಯಾರ್ಥಿಗಳು ಹೇಳಿರುವರು.  ಆನ್‍ಲೈನ್ ಕಲಿಕೆ ಕಷ್ಟಕರವಾದಾಗ, ಮಕ್ಕಳಿಗೆ ಪಾಠದ ಪ್ರಮುಖ ಭಾಗಗಳನ್ನು ಮಾತ್ರ ಕೇಂದ್ರೀಕರಿಸಲಾಗಿದೆ. ಅನೇಕ ವಿಷಯಗಳಲ್ಲಿ ಇದು ಇಡೀ ಪಠ್ಯಪುಸ್ತಕ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

                ಕೆಲವೆಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವುದೂ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಮುಖ್ಯವಾಗಿ ಟ್ವಿಟರ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರಲ್ಲಿ ಯಾರೂ ತಮ್ಮ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಲು ಸಿದ್ಧರಿಲ್ಲ. ಅನಾಮಧೇಯ ಹ್ಯಾಂಡಲ್‍ಗಳಿಂದ ಟ್ವೀಟ್‍ಗಳನ್ನು ಮಾಡಲಾಗುತ್ತಿದೆ. ಸರ್ಕಾರ ಅಥವಾ ಶಿಕ್ಷಣ ಸಂಸ್ಥೆ ಹೊರದಬದಬಬಹುದೆಂಬ ಭಯ ಇದಕ್ಕೆ ಕಾರಣ.

            ಇದೇ ವೇಳೆ ಇತರ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ವೀಡಿಯೊ ಸಂದೇಶಗಳು ಮತ್ತು ಮುಂತಾದವುಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.

    ಅಕ್ಷಯ್ ಚಂದ್ರನ್ ಎಂಬ ವಿದ್ಯಾರ್ಥಿ, "ಕೇರಳ ಸರ್ಕಾರ ಶಿಷ್ಟಾಚಾರದಂತೆ ಆನ್‍ಲೈನ್ ತರಗತಿ ನಡೆಸುತ್ತಿಲ್ಲ, ಆದರೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ದೂರುಗಳನ್ನು ಆಲಿಸುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

           "ಕೆಲವು ವಿದ್ಯಾರ್ಥಿಗಳು ಬೆಳಿಗ್ಗೆ ಪ್ಲಸ್ ಟು ಮತ್ತು ಸಂಜೆ ಪ್ಲಸ್ ಒನ್ ತರಗತಿ ಕಲಿಯಬೇಕಾದ ಸ್ಥಿತಿ ಇದೆ ಎಂದು ವಿದ್ಯಾರ್ಥಿ ಎಂ.ಎಸ್ ಅಭಿನವ್ ಟ್ವೀಟ್ ಮಾಡಿದ್ದಾರೆ.

        ಎಲ್ಲಾ ವಿಷಯಗಳಲ್ಲಿ ಪ್ಲಸ್ ಒನ್ ಪರೀಕ್ಷೆಗೆ ಹಾಜರಾದವರು ಮತ್ತು ಪ್ಲಸ್ ಟು ತರಗತಿಗಳನ್ನು ಪೂರ್ಣಗೊಳಿಸಿದವರು ಮಾತ್ರ ಮುಂದಿನ ವರ್ಷ ಸಾಮಾನ್ಯ ಪರೀಕ್ಷೆಗೆ ಹಾಜರಾಗಬಹುದು ಎಂದು ಉನ್ನತ ಮಾಧ್ಯಮಿಕ ಶಿಕ್ಷಣ ನಿರ್ದೇಶನಾಲಯ ನಿರ್ದೇಶನ ನೀಡಿದೆ.

        ಸಮರಸ ಸುದ್ದಿಯು ಅಭಿಪ್ರಾಯಗಳಿಗಾಗಿ ಕೇರಳ ಶಿಕ್ಷಣ ಇಲಾಖೆ, ಶಿಕ್ಷಕರ ಸಂಘಗಳಾದ ಕೆಎಸ್‍ಟಿಎ, ಎಚ್‍ಎಸ್‍ಟಿಎ ಮತ್ತು ಕೇರಳ ಶಿಕ್ಷಣ ಸಚಿವರನ್ನು ಸಂಪರ್ಕಿಸಿತ್ತು. ಅವರ ಪ್ರತಿಕ್ರಿಯೆ ಲಭ್ಯವಿಲ್ಲ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries