ತಿರುವನಂತಪುರ: ಸರ್ಕಾರಿ ವೈದ್ಯಕೀಯ ಕಾಲೇಜಿನ ನೇಮಕಾತಿ ಸಂದರ್ಶನದಲ್ಲಿ ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆ ಸಂಬಂಧ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯ ಬಗ್ಗೆ ವರದಿ ಕೇಳಿದ್ದು ನೇರ ಪರಿಶೀಲಿಸಲಿದ್ದಾರೆ. ಈ ಘಟನೆಯು ದೊಡ್ಡ ವಿವಾದಕ್ಕೆ ಕಾರಣವಾದ ಬಳಿಕ ಸಚಿವೆ ತುರ್ತು ಪರಿಶೀಲನೆಗೆ ಮುಂದಾದರು. ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ ಗುರುವಾರ ಬೆಳಿಗ್ಗೆ ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು.
ಲಾಕ್ ಡೌನ್ ಸಂದರ್ಭದ ನಿಯಮಗಳನ್ನು ಉಲ್ಲಂಘಿಸಿ ಸಂದರ್ಶನ ನಡೆಸುವುದು ತಪ್ಪು ಕ್ರಮ ಎಂದು ಸಚಿವರು ಹೇಳಿದರು. ಜನಸಂದಣಿ ಇರದಂತೆ ತುರ್ತು ಉಪಕ್ರಮಗಳಿಗೆ ಮುಂದಾಗಬೇಕಿತ್ತು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಈ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣದ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಔಷಧಿಗಳು ಮತ್ತು ಕೈಗವಸುಗಳು ಸೇರಿದಂತೆ ಅಗತ್ಯ ವಸ್ತುಗಳ ಲಭ್ಯತೆಯ ಬಗ್ಗೆ ಸಚಿವರು ಸ್ಪಷ್ಟನೆ ಕೋರಿದರು.
ಗ್ರೇಡ್ 2 ಅಟೆಂಡೆಂಟ್ ಹುದ್ದೆಗೆ ಸಂದರ್ಶನ ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು. 30 ಖಾಲಿ ಹುದ್ದೆಗಳಿಗೆ ಸಂದರ್ಶನಗಳಿಗೆ ಹಾಜರಾಗಲು ಒಂದು ಸಾವಿರಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಆಗಮಿಸಿದ್ದರು. ಆಸ್ಪತ್ರೆಗೆ ಹೋಗುವ ರಸ್ತೆ ಜನರಿಂದ ತುಂಬಿದ್ದರಿಂದ ಆಂಬುಲೆನ್ಸ್‍ಗಳು ಕೂಡ ಸಿಲುಕಿಕೊಂಡವು. ಜನರ ತೀವ್ರ ಸಂದಣಿಯ ಕಾರಣ ಸಂದರ್ಶನವನ್ನು ಬಳಿಕ ಮುಂದೂಡಲಾಯಿತು.


