HEALTH TIPS

ಕೊರೋನಾ ನಿಯಂತ್ರಣಗಳ ಉಲ್ಲಂಘನೆ: ರಾಜ್ಯಕ್ಕೆ 35 ಕೋಟಿ ರೂ. ದಂಡ ಶುಲ್ಕ ಲಾಭ: ಈ ಲಾಕ್‍ಡೌನ್‍ನಲ್ಲಿ 2 ಕೋಟಿ ರೂ ಸಂಗ್ರಹ!

                                                

                     ತಿರುವನಂತಪುರ: ಕೊರೋನಾ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೋಲೀಸರು ಈ ವರ್ಷ 35 ಕೋಟಿ ರೂ.ಗಳ ದಂಡ ವಿಧಿಸಿದ್ದಾರೆ. ಕೇರಳ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪೋಲೀಸರು ದಂಡ ವಿಧಿಸುತ್ತಿದ್ದಾರೆ. ಜನವರಿಯಿಂದ ಜೂನ್ 8 ರವರೆಗಿನ ಈ ಅವಧಿಯಲ್ಲಿ ಜನರಿಂದ 35,17,57,048 ಸಂಗ್ರಹಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು 82,630 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಯಿತು.

                    ಈ ಲಾಕ್‍ಡೌನ್ ಅವಧಿಯಲ್ಲಿ 1,96,31,100 ರೂ.ಗಳನ್ನು ದಂಡ ಶುಲ್ಕವಾಗಿ ವಸೂಲಿ ಮಾಡಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರಿಗೆ 500 ರಿಂದ 5,000 ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ.  ಕೊರೋನಾ ಮಾನದಂಡಗಳನ್ನು ಉಲ್ಲಣಘಿಸಿ ವ್ಯಾಪಾರ ಸಂಸ್ಥೆಗಳು, ಮಾನದಂಡ ಉಲ್ಲಂಘಿಸಿ ಆಯೋಜಿಸಲಾದ ವಿವಾಹ ಸಮಾರಂಭಗಳು, ಮತ್ತಿತರ ಕಾರ್ಯಕ್ರಮಗಳಿಗೆ ರೂ.5 ಸಾವಿರದ ವರೆಗೂ ದಂಡ ವಿಧಿಸಲಾಗುತ್ತಿದೆ. ಮಾಸ್ಕ್ ಧರಿಸದಿದ್ದರೆ 500 ರೂ, ಅನಗತ್ಯವಾಗಿ ಮನೆಯಿಂದ ಹೊರ ತೆರಳಿದವರಿಗೆ 2000 ರೂ. ದಂಡ ವಿಧಿಸಲಾಗಿದೆ. 

          ಮಾನದಂಡ ಉಲ್ಲಂಘಿಸುವವರಿಂದ ಲಭ್ಯವಾಗುವ ದಂಡ ಶುಲ್ಕ ಮೊತ್ತವನ್ನು ಎಲ್ಲಾ ಜಿಲ್ಲೆಗಳಲ್ಲೂ ಪೋಲೀಸರು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ಸ್ಥಾಪಿಸಿದ್ದರು. ಪ್ರತಿನಿತ್ಯ ಸಂಗ್ರಹಗೊಳ್ಳುವ ದಂಡ ವಸೂಲಿ ಶುಲ್ಕವನ್ನು ಆಯಾ ಠಾಣೆಗಳು ಈ ಬ್ಯಾಂಕ್ ಖಾತೆಗೆ ಜಮೆಮಾಡುತ್ತಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries