HEALTH TIPS

ಕೆ.ಎಸ್.ಆರ್.ಟಿ.ಸಿ.ಯ ಮೊದಲ ಎಲ್.ಎನ್.ಜಿ. ಬಸ್ ಸೇವೆ ಪ್ರಾರಂಭ: ಯೋಜನೆ ಕೇಂದ್ರ ಸಂಸ್ಥೆ ಪೆಟ್ರೋನೆಟ್ ಸಹಯೋಗದಲ್ಲಿದೆ

            ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ.ಯ ಮೊದಲ ಎಲ್.ಎನ್.ಜಿ. ಬಸ್ ಸೇವೆ ಕೇರಳದಲ್ಲಿ ನಿನ್ನೆ ಆರಂಭಗೊಂಡಿತು. ಸಾರಿಗೆ ಸಚಿವ ಆಂಟನಿ ರಾಜು ಅವರು ತಂಪನೂರ್ ಕೆ.ಎಸ್.ಆರ್.ಟಿಸಿ.  ಬಸ್ ನಿಲ್ದಾಣದಲ್ಲಿ ಪತಾಕೆ ಬೀಸಿ ಚಾಲನೆ ನೀಡಿದರು. ಕೇಂದ್ರ ಸರ್ಕಾರಿ ಸಂಸ್ಥೆಯಾದ ಪೆಟ್ರೋನೆಟ್ ಎಲ್‍ಎನ್‍ಜಿ ಲಿಮಿಟೆಡ್ ಸಹಯೋಗದೊಂದಿಗೆ ಈ ಸೇವೆಯನ್ನು ಪ್ರಾರಂಭಿಸಲಾಗಿದೆ.

               ವಾಯುಮಾಲಿನ್ಯವನ್ನು ತೊಡೆದುಹಾಕಲು ಮತ್ತು ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಪ್ರಾಯೋಗಿಕ ಆಧಾರದ ಮೇಲೆ ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು. ಈ ಸೇವೆಯು ಮೂರು ತಿಂಗಳವರೆಗೆ ಪ್ರಾಯೋಗಿಕ ಆಧಾರದ ಮೇಲೆ ನಡೆಯುತ್ತದೆ. ಇದು ಲಾಭದಾಯಕವಾಗಿದ್ದರೆ, ಅಧಿಕೃತ ವರದಿಯ ಆಧಾರದ ಮೇಲೆ ಹೆಚ್ಚಿನ ಬಸ್‍ಗಳನ್ನು ಎಲ್‍ಎನ್‍ಜಿಗೆ ಪರಿವರ್ತಿಸಲಾಗುತ್ತದೆ.

        ಬಸ್‍ಗೆ ಇಂಧನ ಬಳಕೆ ಇತ್ತೀಚೆಗೆ ತೀವ್ರ ಕಳವಳಕಾರಿಯಾಗಿದೆ. ಅಲುವಾ, ಏಟ್ಟಮನೂರ್, ಪಪ್ಪನಮ್‍ಕೋಡ್ ಮತ್ತು ವೆಲ್ಲಾರಡ ವ್ಯಾಪ್ತಿಯಲ್ಲಿ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೆ.ಎಸ್.ಆರ್.ಟಿ.ಸಿ. ಪೆಟ್ರೋನೆಟ್ ಅನ್ನು ಕೇಳಿದೆ. ಪ್ರಯೋಗ ಯಶಸ್ವಿಯಾದರೆ, ಮುಂದಿನ ಒಂದು ವರ್ಷದೊಳಗೆ 400 ಬಸ್‍ಗಳನ್ನು ಎಲ್‍ಎನ್‍ಜಿಗೆ ಪರಿವರ್ತಿಸಬಹುದು. 1,000 ಬಸ್‍ಗಳನ್ನು ಸಿಎನ್‍ಜಿಗೆ ಪರಿವರ್ತಿಸಲು ಸರ್ಕಾರ ಯೋಜಿಸಿದೆ.

                ಖಾಸಗಿ ಬಸ್ ಮಾಲೀಕರು ಎಲ್‍ಎನ್‍ಜಿ ಬಸ್ ಮಾದರಿಯನ್ನು ಅಳವಡಿಸಿಕೊಳ್ಳಲು ಸಿದ್ಧರಿದ್ದರೆ, ಆರಂಭಿಕ ಹಣಕಾಸಿನ ವಿನಿಯೋಗಕ್ಕಾಗಿ ಬಸ್ ಮಾಲೀಕರಿಗೆ ನೆರವು ನೀಡಲು ಸರ್ಕಾರ ಪರಿಗಣಿಸುತ್ತದೆ. ಕೆಎಸ್‍ಆರ್‍ಟಿಸಿಯನ್ನು ಆರ್ಥಿಕ ಶಿಸ್ತಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. ಕೆಎಸ್‍ಆರ್‍ಟಿಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿಜು ಪ್ರಭಾಕರ್ ಅವರು ಪೆಟ್ರೋನೆಟ್ ಎಲ್‍ಎನ್‍ಜಿ ಲಿಮಿಟೆಡ್‍ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

               ಪೆಟ್ರೊನೆಟ್ ಎಲ್.ಎನ್.ಜಿ. ಲಿಮಿಟೆಡ್ ಉಪಾಧ್ಯಕ್ಷ ಯೋಗಾನಂದ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೆಎಸ್‍ಆರ್‍ಟಿಸಿ ದಕ್ಷಿಣ ವಲಯ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎಸ್. ಅನಿಲ್ ಕುಮಾರ್ ಮತ್ತು ವಿವಿಧ ಟ್ರೇಡ್ ಯೂನಿಯನ್ ಮುಖಂಡರು ಭಾಗವಹಿಸಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries