HEALTH TIPS

ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟ ರಹಿತ ಔಷಧಗಳು; ಮಾನವ ಹಕ್ಕುಗಳ ಆಯೋಗದಿಂದ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯ

           ಕೋಝಿಕೋಡ್: ಕೇರಳ ವೈದ್ಯಕೀಯ ಸೇವೆಗಳ ನಿಗಮದ (ಕೆಎಂಸಿಸಿ) ಮೂವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‍ಎಂಆರ್‍ಸಿ) ನಿರ್ದೇಶನ ನೀಡಿದೆ. ಡ್ರಗ್ಸ್ ಕಂಟ್ರೋಲರ್ ನ ಔಷಧಗಳು ಗುಣಮಟ್ಟದ್ದಾಗಿಲ್ಲ ಎಂದು ಕಂಡುಕೊಂಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ.

               ಆಯೋಗದ ನ್ಯಾಯಾಂಗ ಸದಸ್ಯ ಕೆ.ಎಸ್. ಬೈಜುನಾಥ್ ಆದೇಶದಲ್ಲಿ ಕ್ರಮ ಕೈಗೊಳ್ಳಲು ಸ|ಊಚನೆ ನೀಡಲಾಗಿದೆ. 

        2013-14ರ ಆರ್ಥಿಕ ವರ್ಷದಲ್ಲಿ ವಿತರಿಸಿದ ಔಷಧಗಳು ಗುಣಮಟ್ಟವಿಲ್ಲದವು ಎಂದು ಕಂಡುಬಂದಿದೆ. ಮಾನವ ಹಕ್ಕುಗಳ ಆಯೋಗದ ಶಿಫಾರಸಿನ ಮೇರೆಗೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ಸಲ್ಲಿಸಿದ ತನಿಖಾ ವರದಿಯು ಗುಣಮಟ್ಟ ನಿಯಂತ್ರಕ, ಮಾಜಿ ಸಹಾಯಕ ವ್ಯವಸ್ಥಾಪಕ ಮತ್ತು ವೈದ್ಯಕೀಯ ಸೇವೆಗಳ ನಿಗಮದ ಮಾಜಿ ಉಪ ವ್ಯವಸ್ಥಾಪಕರನ್ನು ತಪ್ಪುಗಾರರು ಎಂದು ಉಲ್ಲೇಖಿಸಿದೆ. ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಆಯೋಗವು ವೈದ್ಯಕೀಯ ಸೇವೆಗಳ ನಿಗಮದ ಎಂಡಿಗೆ ನಿರ್ದೇಶನ ನೀಡಿದೆ.

                 ಆಸ್ಪತ್ರೆಗಳಲ್ಲಿ ಔಷಧಿಗಳನ್ನು ವಿತರಿಸಿದ ನಂತರ ಸರಬರಾಜು ಪ್ರಾರಂಭಿಸುವ ಸಾಧ್ಯತೆಯ ಬಗ್ಗೆ ಗಮನಹರಿಸುವಂತೆ ಆಯೋಗವು ಆರೋಗ್ಯ ಕಾರ್ಯದರ್ಶಿ ಮತ್ತು ನಿರ್ದೇಶಕರಿಗೆ ನಿರ್ದೇಶನ ನೀಡಿದೆ.  ಮತ್ತು ಔಷಧಗಳು ಗುಣಮಟ್ಟವಿಲ್ಲದವು ಎಂದು ಕಂಡುಬಂದಾಗ ಹಿಂತೆಗೆದುಕೊಳ್ಳುವ ಬದಲು, ಔಷಧಿಗಳನ್ನು ಮುಂಚಿತವಾಗಿ ಸಂಗ್ರಹಿಸಿ ¥ಪ್ರಯೋಗಾಲಯದಲ್ಲಿ ಪರೀಕ್ಷಿಸಲೂ ಸೂಚಿಸಲಾಗಿದೆ. 

           ಔಷಧಿಗಳನ್ನು ರೋಗಿಗಳಿಗೆ ವಿತರಿಸಿದ ನಂತರ ಅದನ್ನು ಹಿಂತೆಗೆದುಕೊಳ್ಳುವುದನ್ನು ಹೀಗೆ ನಿಯಂತ್ರಿಸಬಹುದಾಗಿದೆ.  ಆರೋಗ್ಯದಲ್ಲಿನ ಅಪಾಯಕಾರಿ ಏರುಪೇರುಗಳನ್ನು ನಿಯಂತ್ರಿಸಬಹುದಾಗಿದೆ. 

              ನಿಗಮದ ಔಷಧ ಸಂಗ್ರಹ ಮತ್ತು ವಿತರಣೆಯಲ್ಲಿ ಸಮಯೋಚಿತ ಬದಲಾವಣೆಗಳು ಅತ್ಯಗತ್ಯ. ಸಾಂಪ್ರದಾಯಿಕ ಸಂವಹನ ವಿಧಾನಗಳನ್ನು ಬದಲಿಸಿ ಆಧುನಿಕ ವ್ಯವಸ್ಥೆ ಅನುಸರಿಸಲು ಸೂಚಿಸಲಾಗಿದೆ. 

                ಪರೀಕ್ಷಾ ಪ್ರಯೋಗಾಲಯದಿಂದ ಸ್ವೀಕರಿಸಿದ ಕೂಡಲೇ ಗುಣಮಟ್ಟ ಇಲ್ಲದ ಔಷಧಿಗಳ ಸರಬರಾಜನ್ನು ಸ್ಥಗಿತಗೊಳಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಲು ಇ-ಮೇಲ್ ಮತ್ತು ಇತರ ಆಧುನಿಕ ಸಂವಹನ ವಿಧಾನಗಳನ್ನು ಬಳಸುವಂತೆ ಆಯೋಗವು ಆರೋಗ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

          ಔಷಧಿಗಳ ಗುಣಮಟ್ಟವನ್ನು ಪರೀಕ್ಷಿಸಲು ವೈದ್ಯಕೀಯ ಸೇವಾ ನಿಗಮದೊಳಗೆ ಪರೀಕ್ಷಾ ಸೌಲಭ್ಯಗಳನ್ನು ವಿಸ್ತರಿಸಬೇಕು. ಗೋದಾಮುಗಳ ಆಧುನಿಕ ಮಾನದಂಡಗಳಿಗೆ ನವೀಕರಿಸಬೇಕು. ನಿಗಮದ ಚಟುವಟಿಕೆಗಳನ್ನು ಆಧುನೀಕರಿಸುವಂತೆ ಆಯೋಗವು ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

             ಆರೋಗ್ಯ ಕಾರ್ಯದರ್ಶಿ ಗುಣಮಟ್ಟದ ಔಷಧಿಗಳ ಖರೀದಿ, ವಿತರಣೆ ಮತ್ತು ಹಿಂತೆಗೆದುಕೊಳ್ಳುವಿಕೆಯಲ್ಲಿ ವೈಜ್ಞಾನಿಕತೆಯನ್ನು ಖಚಿತಪಡಿಸಿಕೊಳ್ಳಲು ಶಾಶ್ವತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಬೈಜುನಾಥ್ ಒತ್ತಾಯಿಸಿದರು. ಗುಣಮಟ್ಟದ ಔಷಧಿಗಳನ್ನು ವಿಳಂಬ ಮಾಡದೆ ಹಿಂಪಡೆಯಬೇಕು ಎಂದು ಸೂಚಿಸಲಾಗಿದೆ.

              ಉಪಯೋಗಿಸಲಾಗದ ಔಷಧಿಗಳನ್ನು ವಿತರಿಸಿದ್ದಕ್ಕಾಗಿ ವೈದ್ಯಕೀಯ ಸೇವಾ ನಿಗಮದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಸಾರ್ವಜನಿಕ ಕಾರ್ಯಕರ್ತ ರವಿ ಉಲ್ಲೇರಿ ಸಲ್ಲಿಸಿದ್ದ ದೂರಿನ ಮೇರೆಗೆ ಆಯೋಗವು ಆಗಸ್ಟ್ 16, 2019 ರಂದು ಆದೇಶ ಹೊರಡಿಸಿತ್ತು.

             ಆಯೋಗದ ವಿಚಾರಣಾ ವಿಭಾಗವು ದೂರಿನ ಬಗ್ಗೆ ತನಿಖೆ ನಡೆಸಿದಾಗ ದೂರು ಮಾನ್ಯವಾಗಿದೆ ಎಂದು ತಿಳಿದುಬಂದಿದೆ. ನಂತರ ಅದನ್ನು ವಿವರವಾದ ತನಿಖೆಗಾಗಿ ವಿಜಿಲೆನ್ಸ್ ಗೆ ಜವಾಬ್ದಾರಿ ನೀಡಲಾಯಿತು. ವಿಜಿಲೆನ್ಸ್ ದಕ್ಷಿಣ ವಲಯ ಪೋಲೀಸ್ ಇನ್ಸ್‍ಪೆಕ್ಟರ್ 2021 ರ ಜೂನ್ 7 ರಂದು ಆಯೋಗಕ್ಕೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ಆದೇಶವನ್ನು ಅಂಗೀಕರಿಸಲಾಗಿದೆ.

                  ವೈದ್ಯಕೀಯ ಸೇವಾ ನಿಗಮ, ಸರ್ಕಾರ ಡ್ರಗ್ ಟೆಸ್ಟಿಂಗ್ ಲ್ಯಾಬ್ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರ ಕಚೇರಿ ನಡುವೆ ಔಷಧ ಸಂಗ್ರಹಣೆ, ವಿತರಣೆ ಮತ್ತು ಪರೀಕ್ಷೆಯಲ್ಲಿ ವೃತ್ತಿಪರತೆಯ ಕೊರತೆಯನ್ನು ಆಯೋಗವು  ಬೊಟ್ಟುಮಾಡಿದೆ.     


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries