ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ವಿತರಣೆ ಹಳಿ ತಪ್ಪುತ್ತಿರುವುದಾಗಿ ಆರೋಪಗಳೆದ್ದಿದೆ. ಕೇಂದ್ರ ಒದಗಿಸಿದ ಲಸಿಕೆಯನ್ನು ನಿಖರವಾಗಿ ವಿತರಿಸಲಾಗುತ್ತಿದೆ ಎಂಬ ಹೇಳಿಕೆಯ ಹೊರತಾಗಿಯೂ ವಿತರಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲಾಗಿದೆ. ಕೇರಳದಲ್ಲಿ ಒಂದು ಮಿಲಿಯನ್ ಲಸಿಕೆ ದಾಸ್ತಾನು ಇದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದು, ನಿನ್ನೆ ರಾಜ್ಯದಲ್ಲಿ ದಾಖಲೆಯ ಸಂಖ್ಯೆಯ ಲಸಿಕೆಗಳನ್ನು ನೀಡಲಾಗಿತ್ತು.
ಆಶಾ ಕಾರ್ಯಕರ್ತರು ನಿನ್ನೆ ಹಲವಾರು ಜಿಲ್ಲೆಗಳ ಜನರನ್ನು ಕರೆ ಮಾಡಿ ಲಸಿಕೆ ಅಗತ್ಯವಿದೆಯೇ ಎಂದು ಕೇಳುತ್ತಿದ್ದರು. ನಿನ್ನೆ ರಾತ್ರಿ 9ರ ತನಕ ಲಸಿಕೆ ಹಾಕಿದ ಕೇಂದ್ರಗಳೂ ಇವೆ. ಹೆಚ್ಚಿನ ಕಡೆಗಳಲ್ಲಿ ಸ್ಪಾಟ್ ನೋಂದಣಿ ನಡೆಸಲಾಗಿತ್ತು. ಇದರೊಂದಿಗೆ, ಕೋವಿನ್ ಪೆÇೀರ್ಟಲ್ ಮೂಲಕ ಪೂರ್ವ-ನೋಂದಣಿ ಭಾಗಶಃ ಮಾತ್ರ ನಡೆಯುತ್ತಿದೆ.
ಏತನ್ಮಧ್ಯೆ, ಸರ್ಕಾರಿ ವಿತರಣಾ ಕೇಂದ್ರಗಳಿಗೆ ತಲುಪುವ ಹೆಚ್ಚಿನ ಲಸಿಕೆಗಳನ್ನು ಸ್ಥಳೀಯ ಸರ್ಕಾರಿ ಪ್ರತಿನಿಧಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿತರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅನೇಕ ಸ್ಥಳಗಳಲ್ಲಿ ಘರ್ಷಣೆಗಳೂ ನಡೆದಿವೆ. ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳು ಇದರಲ್ಲಿ ಶಾಮೀಲಾಗಿರುವುದರಿಂದ ಯಾರೂ ಧ್ವನಿಯೆತ್ತಲೂ ನೈತಿಕತೆ ಇಲ್ಲದವರಾಗಿದ್ದಾರೆ.
ವಿತರಣಾ ಸ್ಥಳಗಳಲ್ಲಿ ಜನರ ಅನಿಯಂತ್ರಿತ ಆಗಮಿಸುವಿಕೆಯಿಂದ ಹಲವೆಡೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಲಸಿಕೆ ಎರಡನೇ ಡೋಸ್‍ಗೆ ಸಮಯವಾದರೂ ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಹೆಚ್ಚಿನ ದೂರುಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪೋರ್ಟಲ್‍ನಿಂದ ಬಂದ ಸಂದೇಶ ಲಭಿಸಿ ಬರುವವರೊಂದಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ಕೊರತೆಯ ಕಾರಣ ನೀಡಿ ಹಿಂದೆ ಕಳಿಸಿದ ಉದಾಹರಣೆಗಳೂ ಕೇಳಿಬಂದಿದೆ.
ವಿತರಣಾ ಕೇಂದ್ರಗಳಿಗೆ ನೇರವಾಗಿ ಬರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸರ್ಕಾರಿ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಬುಕ್ ಆಗಿರುವಂತೆ ಕಂಡುಬರುವ ಮಾಹಿತಿಯು ಮೊದಲಿನಿಂದಲೂ ಕೋವಿನ್ ಪೆÇೀರ್ಟಲ್‍ನಲ್ಲಿ ಗೋಚರಿಸುತ್ತದೆ ಎಂದು ದೂರಿದ್ದಾರೆ. ಶಾಲಾ ಶಿಕ್ಷಕರು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 60 ಕ್ಕೂ ಹೆಚ್ಚು ವಿಭಾಗಘಲೀಳಿಗೆ ಆದ್ಯತೆ ನೀಡಲಾಗಿದೆ, ಆದರೆ ಪೆÇೀರ್ಟಲ್‍ನಲ್ಲಿ ಯಾವುದೇ ಸೌಲಭ್ಯಗಳನ್ನು ನಿಯೋಗಿಸಲಾಗಿಲ್ಲ.
ಇದೂ ಒಂದು ಹಿನ್ನqಯಾಗಿದೆÉ. ಏತನ್ಮಧ್ಯೆ, ಲಸಿಕೆ ವಿತರಣೆಯಲ್ಲಿ ಕೇರಳ ರಾಷ್ಟ್ರೀಯ ಮಟ್ಟದಲ್ಲಿ 11 ನೇ ಸ್ಥಾನದಲ್ಲಿದೆ. ಕೇರಳಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳು ಮುಂದಿವೆ. ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಅತ್ಯಧಿಕ ಸಂಖ್ಯೆಯ ವಿತರಣೆ ನಡೆದಿದೆ. ಮೊದಲ ಡೋಸ್ ನ್ನು 3.61 ಕೋಟಿ ಜನರಿಗೆ ಮತ್ತು ಎರಡನೇ ಡೋಸ್ 70 ಲಕ್ಷ ಜನರಿಗೆ ನೀಡಿದೆ.
ಕೇರಳದಲ್ಲಿ ಕೋವಿಡ್ ವ್ಯಾಕ್ಸಿನೇಷನ್‍ನ ಪ್ರಸ್ತುತ ಪರಿಸ್ಥಿತಿ ಇದು:
ಮೊದಲ ಡೋಸ್ -ಶೇ.48, ಮತ್ತು ಎರಡನೇ ಡೋಸ್ -ಶೇ.20
ಆರೋಗ್ಯ ಕಾರ್ಯಕರ್ತರು ಮತ್ತು ಮುಂಡಂಗರ ಮೊದಲ ಡೋಸ್ ಶೇ.100 ಆಗಿದೆ. ಎರಡನೇ ಡೋಸ್ ನ್ನು ಶೇ.82
ಮೊದಲ ಡೋಸ್ 45 (1.13 ಕೋಟಿ) -75%.ರೂ.
18 ರಿಂದ 44 ರ ನಡುವೆ (1.50 ಕೋಟಿ) - ಮೊದಲ ಡೋಸ್ ಶ|ಏ.19 - ಎರಡನೇ ಡೋಸ್ ಶೇ.2.ರಷ್ಟು ನೀಡಲಾಗಿದೆ.





