ಕಾಸರಗೋಡು: ತುಳು ಭಾಷಾ ಸಂಸ್ಕೃತಿಯನ್ನು, ತುಳು ನಾಡು ಕಲೆ ಮತ್ತು ತುಳು ಸಾಹಿತ್ಯವನ್ನು ಎಲ್ಲಾ ಸಾಂಸ್ಕೃತಿಕ ವಲಯಕ್ಕೆ ತಲುಪಿಸಲು ಕೇರಳ ಸಾಂಸ್ಕೃತಿಕ ಇಲಾಖೆಯು ಎಲ್ಲಾ ರೀತಿಯ ಸಹಕಾರಗಳನ್ನು ನೀಡಲಿದೆ ಎಂದು ಶನಿವಾರ ಬೆಳಿಗ್ಗೆ ಕಾಸರಗೋಡು ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಕೇರಳ ಸಂಸ್ಕøತಿ ಇಲಾಖೆಯ ಸಚಿವ ಸಜಿ ಚೆರಿಯಾನ್ ಹೇಳಿದರು.
ಉದುಮ ಶಾಸಕ ನ್ಯಾಯವಾದಿ ಸಿ.ಎಚ್. ಕುಞಂಬು ಮಾತನಾಡಿ ತುಳು ಭಾಷೆಯ ಸಂಸ್ಕಾರವನ್ನು ಉಳಿಸುವ ಅಗತ್ಯತೆಗಳ ಬಗ್ಗೆ ಮಂತ್ರಿಯ ಅವಗಾಹನೆಗೆ ತಂದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಸಾಂಸ್ಕೃತಿಕ ಸಚಿವರನ್ನು ಭೇಟಿಯಾಗಿ ತುಳು ಅಕಾಡೆಮಿಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಅವಗಾಹನೆಗೆ ತಂದು ತುಳು ದಾಖಲೆಗಳನ್ನು ಮಂತ್ರಿಗೆ ನೀಡುವ ಮೂಲಕ ತುಳು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಮ್ಯೂಸಿಯಂ ನಿರ್ಮಾಣಕ್ಕಾಗಿ ಅನುದಾನ ನೀಡಬೇಕೆಂದು ವಿನಂತಿಸಿದರು. ತುಳು ಅಕಾಡೆಮಿ ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್, ಕಾರ್ಯದರ್ಶಿ ಪ್ರದೀಪ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.


