ತಿರುವನಂತಪುರಂ: ರಾಜ್ಯದಲ್ಲಿ ಇಂದು ನಿರೀಕ್ಷೆಯಂತೆ ಭಾರೀ ಪ್ರಮಾಣದ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ಗಾಬರಿಗೆ ಕಾರಣವಾಗಿದೆ. ಇಂದು 31,445 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 4048, ತ್ರಿಶೂರ್ 3865, ಕೋಝಿಕ್ಕೋಡ್ 3680, ಮಲಪ್ಪುರಂ 3502, ಪಾಲಕ್ಕಾಡ್ 2562, ಕೊಲ್ಲಂ 2479, ಕೊಟ್ಟಾಯಂ 2050, ಕಣ್ಣೂರು 1930, ಅಲಪ್ಪುಳ 1874, ತಿರುವನಂತಪುರಂ 1700, ಇಡುಕ್ಕಿ 1166, ಪತ್ತನಂತಿಟ್ಟ 1008, ವಯನಾಡ್ 962 ಮತ್ತು ಕಾಸರಗೋಡು 619 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,65,273 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.19.03 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರೂನಾಟ್, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,06,19,046 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಇಂದು, ಕೋವಿಡ್ ನಿಂದ 215 ಮಂದಿ ಮೃತಪಟ್ಟಿರುವುದು ದಾಖಲಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 19,972 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 138 ಮಂದಿ ರಾಜ್ಯದ ಹೊರಗಿಂದ ಬಂದÀವರು. 29,608 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1576 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 3987, ತ್ರಿಶೂರ್ 3846, ಕೋಝಿಕ್ಕೋಡ್ 3615, ಮಲಪ್ಪುರಂ 3401, ಪಾಲಕ್ಕಾಡ್ 1396, ಕೊಲ್ಲಂ 2469, ಕೊಟ್ಟಾಯಂ 1951, ಕಣ್ಣೂರು 1825, ಅಲಪ್ಪುಳ 1847, ತಿರುವನಂತಪುರಂ 1591, ಇಡುಕ್ಕಿ 1155, ಪತ್ತನಂತಿಟ್ಟ 987, ವಯನಾಡ್ 940 ಮತ್ತು ಕಾಸರಗೋಡು 598 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 123 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 33, ವಯನಾಡು 15, ತ್ರಿಶೂರ್ 13, ಕಾಸರಗೋಡು 11, ಪತ್ತನಂತಿಟ್ಟ, ಪಾಲಕ್ಕಾಡ್ ತಲಾ 10, ಕೊಲ್ಲಂ 8, ಆಲಪ್ಪುಳ 7, ಕೋಝಿಕ್ಕೋಡ್ 6, ಎರ್ನಾಕುಳಂ 4, ಕೊಟ್ಟಾಯಂ, ಇಡುಕ್ಕಿ ತಲಾ 2, ತಿರುವನಂತಪುರ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,271 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1272, ಕೊಲ್ಲಂ 2582, ಪತ್ತನಂತಿಟ್ಟ 258, ಆಲಪ್ಪುಳ 1094, ಕೊಟ್ಟಾಯಂ 850, ಇಡುಕ್ಕಿ 492, ಎರ್ನಾಕುಳಂ 1872, ತ್ರಿಶೂರ್ 2517, ಪಾಲಕ್ಕಾಡ್ 1881, ಮಲಪ್ಪುರಂ 2929, ಕೋಝಿಕ್ಕೋಡ್ 2426, ವಯನಾಡ್ 647, ಕಣ್ಣೂರು 1032 ಮತ್ತು ಕಾಸರಗೋಡು 419 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,70,292 ಮಂದಿ ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 36,92,628 ಮಂದಿ ಇಲ್ಲಿಯವರೆಗೆ ಕೋವಿಡ್ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,70,860 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,44,278 ಮಂದಿ ಜನರು ಮನೆ / ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 26,582 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2439 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳೀಯಾಡಳಿತ ಸರ್ಕಾರಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 74 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 414 ವಾರ್ಡ್ಗಳಲ್ಲಿ ಟಿಪಿಆರ್ 8ಕ್ಕಿಂತ ಹೆಚ್ಚಿದ್ದು, ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.



