ಮಂಜೇಶ್ವರ: ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ ಮಂಜೇಶ್ವರದಲ್ಲಿರುವ ಖದೀಜಮ್ಮ ಬಾಚಳಿಗೆ ಅವರ ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಕೆರೆಯಲ್ಲಿ ಮೀನು ಕೊಯ್ಲು ಮಾಡಲಾಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯ ಅಬ್ದುಲ್ ಹಮೀದ್ ಮಾತನಾಡಿದರು. ಮೀನುಗಾರಿಕಾ ವಿಸ್ತರಣಾಧಿಕಾರಿ ಅನಿಲ್ ಕುಮಾರ್ ಎಜಿ, ಮೀನುಗಾರಿಕಾ ಅಧಿಕಾರಿ ಗಿಜೋಮನ್ ವಿಸಿ, ಯೋಜನಾ ಸಂಯೋಜಕಿ ವೀಣಾ ವಿನೋದ್ ಮತ್ತು ಜಲಕೃಷಿ ಕಾರ್ಯಕರ್ತ ಸುರೇಶ್ ಕಾಳ್ಯಂಗಾಡ್ ಉಪಸ್ಥಿತರಿದ್ದರು.






