ಕಾಸರಗೋಡು: ಬ್ರಹ್ಮಕ್ಯ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರಥಮ ವರ್ಷದ ಆರಾಧನೆ ಇಂದು(ಆ.26) ಶ್ರೀಮದ್ ಎಡನೀರು ಮಠದಲ್ಲಿ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 7 ರಿಂದ 8.30ರ ವರೆಗೆ ಚಮಹಾಪೂಜೆ, 10.30 ರಿಂದ ಗಣಪತಿ ಹೋಮ, ಶ್ರೀವಿಷ್ಣು ಸಹಸ್ರನಾಮ ಹೋಮ, ಮಧ್ಯಾಹ್ನ 12 ರಿಂದ ಮಹಾಪೂಜೆ, 12.30ಕ್ಕೆ ವೃಂದಾವನ ಪೂಜೆ, ರಾತ್ರಿ 8ಕ್ಕೆ ಶ್ರೀದೇವರ ಪೂಜೆ, 8.30ಕ್ಕೆ ವೃಂದಾವನ ಪೂಜೆ ನೆರವೇರಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಹುಸೇನ್ ಸಾಬ್ ಕನಕಗಿರಿ ಮತ್ತು ಬಳಗದವರಿಂದ ದಾಸ ಸಂಕೀರ್ತನೆ, ಮಧ್ಯಾಹ್ನ 2ಕ್ಕೆ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಅವರಿಂದ ನವರಸ ಶಿವಪದಂ ನೃತ್ಯ ಪ್ರಸ್ತುತಿ, ಅಪರಾಹ್ನ 3 ರಿಂದ ಶ್ರೀಎಡನೀರು ಮೇಳದ ಪೂರ್ವ ಕಲಾವಿದರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ.
ನಾಳೆ (ಆ.27) ಬೆಳಿಗ್ಗೆ 9.30ರಿಂದ ಉಜಿರೆ ಅಶೋಕ್ ಭಟ್ ತಂಡದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30 ರಿಂದ ಲಯಲಹರಿ ತಂಡ ಬೆಂಗಳೂರು ಅವರಿಂದ ಆನೂರು ಅನಂತಕೃಷ್ಣ ಶರ್ಮ ಬೆಂಗಳೂರು ನಿರ್ದೇಶನದಲ್ಲಿ ಗಾನ ವಾದ್ಯ ವೈವಿಧ್ಯ ನಡೆಯಲಿದೆ. ಶನಿವಾರ ಬೆಳಿಗ್ಗೆ 9.30 ರಿಂದ ಉದಯ ಕಾಸರಗೋಡು ಮತ್ತು ಬಳಗದವರಿಂದ ಸ್ಯಾಕ್ಸೋಪೋನ್ ಕಚೇರಿ, ಅಪರಾಹ್ನ 2.30 ರಿಂದ ಶ್ರೀಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ.


