ಮಂಜೇಶ್ವರ: ಯಕ್ಷ ಬಳಗ ಹೊಸಂಗಡಿ, ಮಂಜೇಶ್ವರ ಇದರ 30 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಆಷಾಡ ಮಾಸದ ಯಕ್ಷಗಾನ ತಾಳಮದ್ದಲೆ ಕೂಟ ಮೂಡಂಬೈಲು ಶ್ರೀರಾಮ ಮಂದಿರದಲ್ಲಿ ನಡೆಯಿತು. ಈ ವೇಳೆ ನಡೆದ ಸರಳ ಸಮಾರಂಭದಲ್ಲಿ ಯಕ್ಷಬಳಗದೊಂದಿಗೆ ಬಹುಕಾಲದ ಒಡನಾಡಿ ಹಿರಿಯ ಮದ್ದಳೆಗಾರ ರಾಜಾರಾಮ ಬಲ್ಲಾಳ್ ಚಿಪ್ಪಾರು ಇವರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಶಂಕರ್ ರೈ ಮಾಸ್ತರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್, ಅಪ್ಪತ್ತಿಮಾರ್ ಶಿವರಾಮ ಪದಕಣ್ಣಾಯ, ವೇದಮೂರ್ತಿ ಚೇತನ್ ರಾಮ್ ನೂರಿತ್ತಾಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೀಯಪದವು ವಿದ್ಯಾವರ್ಧಕ ಪ್ರೌಢ ಶಾಲೆಯ ಶಿಕ್ಷಕ ರಾಜಾರಾಮ್ ರಾವ್ ಮೀಯಪದವು ಅಭಿನಂದನಾ ಭಾಷಣ ಮಾಡಿದರು. ನಾಗರಾಜ ಪದಕಣ್ಣಾಯ ಸ್ವಾಗತಿಸಿ, ಸತೀಶ್ ಅಡಪ್ಪ ಸಂಕಬೈಲು ವಂದಿಸಿದರು. ಬಳಿಕ "ಶ್ರೀ ರಾಮ ನಿರ್ಯಾಣ" ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಲವ ಆಚಾರ್ಯ ಐಲ, ಚಿಪ್ಪಾರು ರಾಜಾರಾಮ ಬಲ್ಲಾಳ್, ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ಯಕ್ಷಬಳಗದ ಸಂಚಾಲಕ ಸತೀಶ್ ಅಡಪ ಸಂಕಬೈಲು ಭಾಗವಹಿಸಿದರು.


