ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಚೆರುವತ್ತೂರು-ಮಯ್ಯಿಚ್ಚ ತಿರುವು ಪ್ರದೇಶದಲ್ಲಿ ಕುಳಿಯ ಕಾರಣ ಅನೇಕ ಮಂದಿ ಮೃತಪಟ್ಟ ಸಂಬಂಧ ದೂರಿನ ಹಿನ್ನೆಲೆಯಲ್ಲಿ ಕಾರ್ಯಕಾರಿ ಇಂಜಿನಿಯರ್ ಅವರಲ್ಲಿ ಮಾನವಹಕ್ಕು ಆಯೋಗ ವರದಿ ಕೇಳಿದೆ.
ಸಂಜೀವನ್ ಮಡಿಯನ್ ಎಂಬವರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ ಆಯೋಗ ಈ ಕ್ರಮ ಕೈಗೊಂಡಿದೆ.
ಪತಿ ನಿಧನರಾದ ಮೇಲೆ ಆರ್ಥಿಕ ಮುಗ್ಗಟ್ಟು ಸಂಬಂಧ ಬಂಗ್ರ ಮಂಜೇಶ್ವರ ನಿವಾಸಿ ಮಂಜುಳಾ ಎಂಬವರು ಗ್ರಾಮ ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ, ಸೂಕ್ತ ಉತ್ತರ ಲಭಿಸಿಲ್ಲ ಎಂದು ದೂರು ಸಲ್ಲಿಸಿದ್ದು, ಆಯೋಗ ಪರಿಶೀಲಿಸಿದೆ.
ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಆಯೋಗ ಸದಸ್ಯ ಕೆ.ಬೈಜುನಾಥ್ ದೂರು ಸ್ವೀಕರಿಸಿ ಪರಿಹಾರ ಒದಗಿಸಿದ್ದರು. ಒಟ್ಟು 54 ಕೇಸುಗಳನ್ನು ಪರಿಶೀಲಿಸಿದ್ದು, 26 ಮಂದಿ ದೂರುದಾತರು ಹಾಜರಾದರು. 7 ದೂರುಗಳಿಗೆ ತೀರ್ಪು ಒದಗಿಸಲಾಗಿದೆ. ನೂತನ 2 ದೂರುಗಳೂ ಸಲ್ಲಿಕೆಯಾಗಿದ್ದುವು.

