ಕಾಸರಗೋಡು: ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳಾಗಿ ಘೋಷಿಸಲಾಗಿದೆ.
ಆ.18ರಿಂದ 24 ವರೆಗಿನ ಒಂದು ವಾರದ ಗಣನೆ(ಡಬ್ಲ್ಯೂ.ಐ.ಪಿ.ಆರ್.) 8ಕ್ಕಿಂತ ಅಧಿಕವಿರುವ ಪ್ರದೇಶಗಳು ಕಾಸರಗೋಡು ಜಿಲ್ಲೆಯಲ್ಲಿ ಇಲ್ಲ.ಯಾವ ಸ್ಥಳೀಯಾಡಳಿತೆ ಸಂಸ್ಥೆಗಳಲ್ಲೂ ಸಂಪೂರ್ಣ ಲಾಕ್ ಡೌನ್ ಇಲ್ಲ.
ಡಬ್ಲ್ಯೂ.ಐ.ಪಿ.ಆರ್. 5ಕ್ಕಿಂತ ಅಧಿಕವಿರುವ ಕಳ್ಳಾರು, ಕೋಂಡೋಂ-ಬೇಳೂರು, ಬೇಡಡ್ಕ ಗ್ರಾಮ ಪಂಚಾಯತ್ ಗಳು, ನೀಲೇಶ್ವರ ನಗರಸಭೆಯ 8,10,22,24 ವಾರ್ಡ್ ಗಳು, ಕಾಞಂಗಾಡು ನಗರಸಭೆಯ 10,15,24 ವಾರ್ಡ್ ಗಳು, ಕಾಸರಗೋಡು ನಗರಸಭೆಯ 10 ನೇ ವಾರ್ಡ್ ಗಳಲ್ಲಿ ಆರೋಗ್ಯ ಇಲಾಖೆ, ಸಂಬಂಧಪಟ್ಟ ಸ್ಥೇಗಳೂ ಪ್ರತ್ಯೇಕ ಜಾಗ್ರತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
5 ಕ್ಕಿಂತ ಅಧಿಕ ಆಕ್ಟಿವ್ ಕೇಸುಗಳು ಒಂದು ಪ್ರತ್ಯೇಕ ಪ್ರದೇಶ ಕೇಂದ್ರೀಕರಿಸಿ 30 ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಾಗಿ ಜಿಲ್ಲಾಧಿಕಾರಿ ಆದೇಶ ಪ್ರಕಟಿಸಿದರು. ಈ ಪ್ರದೇಶಗಳಲ್ಲಿ ಮಾತ್ರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುವುದು.


