ಕಾಸರಗೋಡು: ಕೋವಿಡ್ ಸಂಬಂಧ ಮೃತಪಟ್ಟ ಇ.ಎಸ್.ಐ. ಸದಸ್ಯರಾದ 40 ಮಂದಿ ಕಾರ್ಮಿಕರ 16 ಮಂದಿ ಆಶ್ರಿತರಿಗೆ ಸೌಲಭ್ಯ ಒದಗಿಸಲಾಗಿದೆ.
ಇ.ಎಸ್.ಐ. ಕಾರ್ಪರೇಷನ್ ಕೇರಳ ರೀಜನ್ ವ್ಯಾಪ್ತಿಯಲ್ಲಿ ಬರುವ ವಿವಿಧ ರಾಜ್ಯಗಳಿಂದ ಆಗಮಿಸಿ ನೌಕರಿ ನಡೆಸುತ್ತಿದ್ದ ಕಾರ್ಮಿಕರಲ್ಲಿ ಕೋವಿಡ್ ಸಂಬಂಧ ಮೃತಪಟ್ಟ 49 ಮಂದಿಯ ಆಶ್ರಿತರಿಗೆ ಇ.ಎಸ್.ಐ. ಕೋವಿಡ್-19 ಸಾಂತ್ವನ ಯೋಜನೆಯಡಿ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ. ಆ.6 ವರೆಗಿನ ಗಣನೆ ಇದಾಗಿದೆ.
ಮೃತಪಟ್ಟ ಕಾರ್ಮಿಕರ ವೇತನದ ಶೇ 90 ಮೊಬಲಗನ್ನು ಆಶ್ರಿತರಿಗೆ ನಿಗದಿತ ರೂಪದಲ್ಲಿ ಪ್ರತಿ ತಿಂಗಳು ನೀಡಲಾಗುತ್ತದೆ. ಜೊತೆಗೆ ಮೃತರ ಪತ್ನಿ ಯಾ ಪತಿಗೆ ವರ್ಷಕ್ಕೆ 120 ರೂ. ಪಾವತಿಸಿ ಇ.ಎಸ್.ಐ. ಚಿಕಿತ್ಸೆ ಪಡೆಯಬಹುದಾಗಿದೆ. 2020 ಮಾ.24 ರಿಂದ ಹಿಂದಿನ ಕ್ರಮದಂತೆಯೇ 2 ವರ್ಷದ ಅವಧಿಗೆ ಸೌಲಭ್ಯ ಆರಂಭದ ಹಂತದಲ್ಲಿ ಜಾರಿಗೊಳ್ಳಳಿದೆ. ಕೋವಿಡ್ ಕಾರಣದಿಂದ ನೌಕರಿ ಬಿಟ್ಟು ಇರಬೇಕಾಗಿ ಬಂದ ಕಾರಣದ ವೇತನ ನಷ್ಟ ಪರಿಹರಿಸುವ ನಿಟ್ಟಿನಲ್ಲಿ ಇ.ಎಸ್.ಐ. ಕಾಯಿದೆ 1948 ಪ್ರಕಾರ ಡೈರೆಕ್ಟರ್ ಅವರ ಸರ್ಟಿಫಿಕೇಷನ್ ತಳಹದಿಯಲ್ಲಿ ಸರಾಸರಿ ವೇತನದ ಶೇ 70 ವರ್ಷದಲ್ಲಿ ಗರಿಷ್ಠ 90 ದಿನ ವರೆಗೆ ಚಿಕಿತ್ಸಾ ಸೌಲಭ್ಯ ರೂಪದಲ್ಲಿ ಲಭಿಸಲಿದೆ.
ಇ.ಎಸ್.ಐ. ಕಾಯಿದೆ ಪ್ರಕಾರ ನೋಂದಣಿ ನಡೆಸಿರುವ ಕಾರ್ಮಿಕ ಕೋವಿಡ್ -19 ಕಾರಣ ಮೃತಪಟ್ಟಿದ್ದರೆ ಅವರ ಕುಟುಂಬಕ್ಕೆ ಅವರಲ್ಲಿನ ಹಿರಿಯ ಸದಸ್ಯ ಯಾ ಯಾರು ಅಂತಿಮಸಂಸ್ಕಾರದ ವೆಚ್ಚ ನಡೆಸಿದ್ದಾರೋ, ಅವರಿಗೆ 15 ಸಾವಿರ ರೂ. ನೀಡಲಾಗುತ್ತಿದೆ. ಪ್ರತಿ ರಾಜ್ಯದೊಂದಿಗೆ ಸಂಬಂಧಪಟ್ಟ ದೂರುಗಳಿದ್ದಲ್ಲಿ 15 ದಿನಗಳ ಅವಧಿಯಲ್ಲಿ ಪರಿಹರಿಸಲಾಗುವುದು. ದೂರವಾಣಿ ಸಂಖ್ಯೆ: 9645964566. ವೆಬ್ ಸೈಟ್ : www.esic.nic.in



