ಕಣ್ಣೂರು: ಮನೆಯ ಟೆರೇಸ್ ಮೇಲೆ ನಿಂತಿದ್ದ ಕಾರಿನ ಚಿತ್ರವನ್ನು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದು ಯಾವ ಪವಾಡ ಎಂದು ಯೋಚಿಸೋಣ. ಇದರ ಹಿಂದಿನ ಸತ್ಯ ಏನು ಎಂದು ನೋಡೋಣ.
ಈ ಕಾರನ್ನು ಕಣ್ಣೂರಿನ ಪಯ್ಯನ್ನೂರು ದೇವಸ್ಥಾನದ ಬಳಿ ಪ್ರಸೂನ್ ನ ಮನೆಮೇಲಿನ ಟೆರೇಸ್ ನಲ್ಲಿ ನಿಲ್ಲಿಸಲಾಗಿತ್ತು. ಮೇಲ್ನೋಟಕ್ಕೆ ಇದು ಕಾರಿನಂತೆ ಕಾಣುತ್ತದೆ ಆದರೆ ಇದು ನೈಜ ಕಾರಲ್ಲ. ಕಾಂಕ್ರೀಟ್‍ನಲ್ಲಿ ರಚಿಸಲಾದ ಸುಂದರ ಕಾರು.
ಅಡುಗೆಮನೆಯ ಚಿಮಣಿ ಮೇಲ್ಗಡೆ ಅದರ ರಚನೆ ಅಸಹ್ಯವಾಗಿ ಕಾಣಿಸುತ್ತಿದ್ದುದರಿಂದ ಅದನ್ನು ಸರಿಪಡಿಸಲು ಮನೆಯ ಮಾಲೀಕರು ತಂದ ಆಲೋಚನೆ ಇದು. ಹೊಗೆ ಚಿಮಣಿ ಮೂಲಕ ಹೊರಹೋಗಬೇಕು. ಆದರೆ ಚಿಮಣಿ ಕಾಣಬಾರದು.
ಪ್ರಮುಖ ಶಿಲ್ಪಿ ಪಿವಿ ರಾಜೀವ್ ಸವಾಲನ್ನು ಸ್ವೀಕರಿಸಿದರು. ಅವರಿಂದ ವಾರಗಳ ಕಠಿಣ ಪರಿಶ್ರಮದ ಬಳಿಕ, ಕಾರು ಟೆರೇಸ್ ಮೇಲೆ ಸಿದ್ಧವಾಯಿತು. ಕಾಂಕ್ರೀಟ್ ಕಾರು 12 ಅಡಿ ಉದ್ದ, ಆರು ಅಡಿ ಎತ್ತರ ಮತ್ತು ಐದು ಅಡಿ ಅಗಲವಿದ್ದು, ಸ್ವಿಫ್ಟ್ ಕಾರಿನಷ್ಟೇ ಗಾತ್ರ ಹೊಂದಿದೆ. ಹೀಗೆ, ನ್ಯೂನತೆಯೊಂದನ್ನು ಸರಿಪಡಿಸಲು ಹೋಗಿ ಅದೇ ಪ್ರಚಾರದ ವಸ್ತುವಾದುದು ವಿಶೇಷವೆಂದೇ ಹೇಳಬೇಕು. ಎಂತೆಂತ ತಲೆಯವರಿದ್ದಾರೆ ಮರ್ರೆ!


