ಕೊಚ್ಚಿ: ಚಲನಚಿತ್ರ ನಟ ಹರೀಶ್ ಪೆರಾಡಿ ಅವರು ರಾಜ್ಯದಲ್ಲಿ ಕೋವಿಡ್ ಹೆಚ್ಚಳಕ್ಕೆ ಪ್ರತಿಕ್ರಿಯಿಸಿದ್ದಾರೆ. ಹರೀಶ್ ಪೆರಾಡಿ ಅವರು ಮಾಜಿ ಸಚಿವೆ ಶೈಲಜಾ ಟೀಚರ್ ಅವರ ಬೆಲೆ ಈಗ ಅರ್ಥವಾಗಿದೆಯೇ ಮತ್ತು ರಾಜ್ಯವನ್ನು ಕೋವಿಡ್ ನಿಂದ ಪಾರು ಮಾಡಲು ಅವರನ್ನು ಕೆಲವು ದಿನಗಳಾದರೂ ಮರಳಿ ಕರೆಸಬಹುದೇ ಎಂದು ಕೇಳಿದ್ದಾರೆ.
ಹರೀಶ್ ಪೆರಾಡಿ ಅವರ ಫೇಸ್‍ಬುಕ್ ಪೋಸ್ಟ್:
ಟೀಚರ್, ನಮ್ಮ ಶಾಲೆ ಮತ್ತೆ ಸೋತಿದೆ. ನೀವು 3 ಶೇ. ಕ್ಕೆ ತಂದಿದ್ದ ಫಲಿತಾಂಶ, ಮತ್ತೆ ಇದೀಗ 19 ಶೇ. ತಲುಪಿದೆ. ಇತರ ಶಾಲೆಗಳಲ್ಲಿ ಮಕ್ಕಳು ನಮ್ಮನ್ನು ಗೇಲಿ ಮಾಡಲು ಆರಂಭಿಸಿದ್ದಾರೆ. ಇನ್ನಾದರೂ ಸ್ವಲ್ಪ ದಿನದ ಮಟ್ಟಿಗೆ ಮರಳಿ ಬರಬಹುದೇ ಎಂದು ಕೇಳಲಾಗಿದೆ.


