ಕಾಸರಗೋಡು: ನಾಗಾರಾಧನೆಯ ಮೂಲಕ ನಾಗಬನ, ಪ್ರಕೃತಿಯನ್ನು ಪೂಜಿಸುವ ಹಾಗೂ ಪ್ರಕೃತಿ ಸಂರಕ್ಷಣೆ ನಿಟ್ಟಿನಲ್ಲಿ ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ27 ಜನ್ಮನಕ್ಷತ್ರಗಿಡಗಳನ್ನು ನೆಡುವ ಕಾರ್ಯಕ್ರಮ ನೆರವೇರಿತು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಅರವತ್ ದಾಮೋದರತಂತ್ರಿವರ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳ ತಂತ್ರಿವರ್ಯರಾದ ಬ್ರಹ್ಮಶ್ರೀ ಪದ್ಮನಾಭನ್‍ಅರವತ್, ಬ್ರಹ್ಮಶ್ರೀ ವಿಷ್ಣುಪ್ರಕಾಶ್ ಪಟ್ಟೇರಿ ಕಾವು, ಬ್ರಹ್ಮಶ್ರೀಪದ್ಮನಾಭನ್ ಇರುವೈಲು, ಬ್ರಹ್ಮಶ್ರೀ ಪದ್ಮನಾಭನ್ ಪಟ್ಟೇರಿ ಆಲಂಪಾಡಿ, ಬ್ರಹ್ಮಶ್ರೀ ಪರಮೇಶ್ವರನ್ ವಾರಿಕ್ಕಾಡು, ಬ್ರಹ್ಮಶ್ರೀನಾರಾಯಣ ಪಟ್ಟೇರಿ ಕಕ್ಕಾಟು, ಬ್ರಹ್ಮಶ್ರೀ ಕೃಷ್ಣದಾಸ್‍ಇರುವೈಲು, ಬ್ರಹ್ಮಶ್ರೀ ವಿಷ್ಣು ಪಟ್ಟೇರಿ ಮೆಕ್ಕಾಟು, ಬ್ರಹ್ಮಶ್ರೀಸುಬ್ರಹ್ಮಣ್ಯನ್ ವಾರಿಕ್ಕಾಡು ಅವರು 27 ಜನ್ಮ ನಕ್ಷತ್ರ ಗಿಡಗಳನ್ನು ವಿಧಿವಿಧಾನಗಳ ಪ್ರಕಾರ ಪೂಜಿಸಿ ಪ್ರತ್ಯೇಕ ಸಿದ್ಧಪಡಿಸಿದ ಸ್ಥಳದಲ್ಲಿ ನೆಟ್ಟು ನೀರೆರೆದರು. ಪ್ರತಿ ನಕ್ಷತ್ರದಲ್ಲಿ ಜನಿಸಿದವರಿಗೆ ಒಂದೊಂದು ನಕ್ಷತ್ರ ವೃಕ್ಷ ಇರುವುದಾಗಿ ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಆ ನಕ್ಷತ್ರ ವೃಕ್ಷಗಳನ್ನು ಪೂಜಿಸಿ ನೆಟ್ಟು ಪೋಷಿಸುವುದರಿಂದ ಆಯುಷ್ಯ,ಆರೋಗ್ಯ, ಸಂಪತ್ತು ವೃದ್ಧಿ ಸಾಧ್ಯ ಎಂದು ಅಖಿಲ ಕೇರಳತಂತ್ರಿಸಮಾಜದ ಸಂಚಾಲಕ ಬ್ರಹ್ಮಶ್ರೀ ಎಡಕಾಯಿಶ್ರೀರಾಮನ್ ನಂಬೂದಿರಿ ತಿಳಿಸಿದರು. ಕ್ಷೇತ್ರದ ಬ್ರಹ್ಮವಾಹಕರಾದ ಮುಟ್ಟತ್ತೋಡಿ ಕೃಷ್ಣಪ್ರಸಾದ್, ಮುಖ್ಯ ಅರ್ಚಕ ಸುಬ್ರಾಯ ಕಾರಂತ, ಸಹಾಯಕ ಅರ್ಚಕ ಗೊಪಾಲಕೃಷ್ಣ ಕಾರಂತ, ಸುಬ್ರಹ್ಮಣ್ಯ ಮಯ್ಯ ಸಹಕರಿಸಿದರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಟ್ರಸ್ಟ್ ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು, ಕಾರ್ಯದರ್ಶಿ ವಸಂತ ಹಾಗು ಟ್ರಸ್ಟ್ ಸದಸ್ಯರು, ಯುವಕ ಮಹಿಳಾ ಸಂಘದಸದಸ್ಯರು ಸಹಕರಿಸಿದರು.



