ಕಾಸರಗೋಡು: ಕಾಸರಗೋಡಲ್ಲಿ ಸಿಪಿಎಂ ಓಣಂ ಕಿಟ್ ವಿತರಿಸಿದ ಬೆಲ್ಲದ( ಶರ್ಕರ ಬೆರಟಿ) ವಿವಾದದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಿಪಿಎಂ ಮಾಣಿಯತ್ ಸ್ಥಳೀಯ ಸಮಿತಿ ಸದಸ್ಯೆ ಪಿಟಿ ಅನಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಮಾಣಿಯತ್ ಶಾಖಾ ಸದಸ್ಯ ಟಿ.ವಿ.ಬಾಲನ್ ರಿಗೆ ಎಚ್ಚರಿಕೆ ನೀಡಲಾಗಿದೆ. ಕುಟುಂಬಶ್ರೀಗಳ ಹೆಸರಿನಲ್ಲಿ ಓಣಂ ಕಿಟ್ ನಲ್ಲಿ ಬೆಲ್ಲ ವಿತರಿಸಿದ ಕಾರಣ ಬಳಿಕ ಅದು ವಿವಾದಕ್ಕೆಡೆಯಾಯಿತು.
ಕಾಸರಗೋಡು ಜಿಲ್ಲೆಯಲ್ಲಿ ವಿತರಿಸಿದ ಓಣಂ ಕ್ಕಿಟ್ ನ್ನು ಭಾಗ್ಯಧರ ಕುಟುಂಬಶ್ರೀ 'ಬೆಲ್ಲ' ಎಂಬ ಹೆಸರಲ್ಲಿ ವಿತರಿಸಿದ್ದರು. ಕುಟುಂಬಶ್ರೀ ಸದಸ್ಯರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕುಟುಂಬಶ್ರೀ ಕೂಡಾ ಓಣಂ ಕಿಟ್ ಪ್ರತ್ಯೇಕವಾಗಿ ನಡೆಸಿತ್ತು. ಆಡಳಿತದ ಪ್ರಭಾವದಿಂದ ಅವರು ಕುಟುಂಬಶ್ರೀ ಹೆಸರಿನಲ್ಲಿ ಬೆಲ್ಲ ತಯಾರಿಸಿ ಅದನ್ನು ಓಣಂ ಕಿಟ್ ಮೂಲಕ ಮಾರಾಟ ಮಾಡಿದ್ದರು.

