ನವದೆಹಲಿ: 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ವಿತರಣೆ ಅಕ್ಟೋಬರ್ ವೇಳೆಗೆ ಆರಂಭಿಸಲು ತೀರ್ಮಾನಿಸಲಾಗಿದೆ. ಈ ಮಾಹಿತಿಯನ್ನು ಕೊರೋನಾ ವಕಿರ್ಂಗ್ ಗ್ರೂಪ್ ನ ಅಧ್ಯಕ್ಷ ಡಾ.ಎನ್.ಕೆ ಅರೋರಾ ನೀಡಿದ್ದಾರೆ. ಆದಾಗ್ಯೂ, ವಯಸ್ಕರ ವ್ಯಾಕ್ಸಿನೇಷನ್ ಪೂರ್ಣಗೊಂಡ ನಂತರವೇ ಮಕ್ಕಳಿಗೆ ಲಸಿಕೆ ಹಾಕಬೇಕು ಎಂದು ಡಾ.ಎನ್.ಕೆ.ಅರೋರಾ ತಿಳಿಸಿರುವರು.
ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಗಂಭೀರವಾಗಿ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಸಾಧ್ಯವಾದಷ್ಟು ಬೇಗ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸುವುದು ಮುಖ್ಯ. ಇದಕ್ಕಾಗಿ 12 ರಿಂದ 17 ವರ್ಷದೊಳಗಿನ ಮಕ್ಕಳ ಆದ್ಯತೆಯ ಪಟ್ಟಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅರೋರ ತಿಳಿಸಿದ್ದಾರೆ.
ಸೈಕೋವ್-ಡಿ ಡಿಎನ್ ಆಧರಿಸಿದ ವಿಶ್ವದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೂಜಿ ರಹಿತ ಕೊರೋನಾ ಲಸಿಕೆಯಾಗಿದೆ. ಲಸಿಕೆಯನ್ನು ಇತ್ತೀಚೆಗೆ ಭಾರತದ ಔಷಧ ನಿಯಂತ್ರಕರು ಅನುಮೋದಿಸಿದ್ದಾರೆ.
ಪ್ರಸ್ತುತ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ನಂತಹ ಲಸಿಕೆಗಳನ್ನು ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ನೀಡಲಾಗುತ್ತಿದೆ.



