HEALTH TIPS

ದೇವಸ್ಥಾನ ಕಠಿಣ ಸಮಯವನ್ನು ಎದುರಿಸುತ್ತಿದೆ: ಪದ್ಮನಾಭಸ್ವಾಮಿ ದೇಗುಲ

               ನವದೆಹಲಿ: 'ದೇವಸ್ಥಾನ ಬಹಳ ಕಷ್ಟದ ಸಮಯ ಎದುರಿಸುತ್ತಿದೆ. ದೇವಸ್ಥಾನದ ಖರ್ಚುಗಳನ್ನು ಪೂರೈಸಲು ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಹಾಗಾಗಿ ಟ್ರಸ್ಟ್‌ನ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕು' ಎಂದು ಕೇರಳದ ಪದ್ಮನಾಭಸ್ವಾಮಿ ದೇಗುಲದ ಆಡಳಿತ ಮಂಡಳಿಯು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಒತ್ತಾಯಿಸಿದೆ.

             'ಕೇರಳದ ಎಲ್ಲಾ ದೇವಸ್ಥಾನಗಳು ಮುಚ್ಚಿವೆ. 1.25 ಕೋಟಿ ದೇವಸ್ಥಾನದ ಮಾಸಿಕ ವೆಚ್ಚ. ಆದರೆ ನಮಗೆ ದೊರೆಯುತ್ತಿರುವುದು ಕೇವಲ 60-70 ಲಕ್ಷ' ಎಂದು ದೇಗುಲದ ಮಂಡಳಿ ಪರವಾಗಿ ಹಾಜರಿದ್ದ ವಕೀಲ ಆರ್‌. ಬಸಂತ್‌ ಅವರು ನ್ಯಾಯಾಲಯಕ್ಕೆ ತಿಳಿಸಿದರು.

            ನ್ಯಾಯಮೂರ್ತಿಗಳಾದ ಯು.ಯು ಲಲಿತ್‌, ಎಸ್‌.ರವೀಂದ್ರ ಭಟ್‌ ಮತ್ತು ಬೇಲಾ ಎಂ. ತ್ರಿವೇದಿ ಅವರ ಪೀಠವು ಅರ್ಜಿ ವಿಚಾರಣೆ ನಡೆಸಿತು.

            'ನ್ಯಾಯಾಲಯದ ಆದೇಶದಂತೆ ಟ್ರಸ್ಟ್‌ ರೂಪಿಸಲಾಗಿದೆ. ಈ ಟ್ರಸ್ಟ್‌ ದೇವಸ್ಥಾನಕ್ಕೆ ಕೊಡುಗೆಗಳನ್ನು ನೀಡಬೇಕು' ಎಂದು ಬಸಂತ್‌ ಅವರು ಪೀಠಕ್ಕೆ ತಿಳಿಸಿದರು.

            ಟ್ರಸ್ಟ್‌ ಪರ ವಕೀಲ ಅರವಿಂದ್‌ ದತ್ತರ್‌ ಅವರು, 'ರಾಜಮನೆತನದ ಸಾರ್ವಜನಿಕ ಟ್ರಸ್ಟ್‌, ಆಡಳಿತದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಈ ಬಗ್ಗೆ ಅರ್ಜಿಯಲ್ಲಿ ಪ‍್ರಸ್ತಾಪಿಸಿಲ್ಲ. ರಾಜಮನೆತನವನ್ನು ಒಳಗೊಂಡ ಪೂಜೆ ಮತ್ತು ಆಚರಣೆಗಳ ಮೇಲೆ ನಿಗಾವಹಿಸಲು ಟ್ರಸ್ಟ್‌ ಅನ್ನು ರಚಿಸಲಾಗಿದೆ. ಅಮಿಕಸ್ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲ) ಟ್ರಸ್ಟ್‌ನ ಖಾತೆಗಳನ್ನು ಲೆಕ್ಕ ಪರಿಶೋಧನೆ ಮಾಡಬೇಕೆಂದು ಹೇಳಿದ್ದಾರೆ. ಆದರೆ ದೇವಸ್ಥಾನ ಮತ್ತು ಟ್ರಸ್ಟ್‌ ‍ಪ್ರತ್ಯೇಕವಾಗಿರುವುದರಿಂದ ಇದರ ಅವಶ್ಯಕತೆಯಿಲ್ಲ' ಎಂದು ವಾದಿಸಿದರು.

              ಈ ಬಗ್ಗೆ ವಿಚಾರಣೆ ನಡೆಸಿದ ಪೀಠವು, 25 ವರ್ಷಗಳ ಲೆಕ್ಕಪರಿಶೋಧನೆಯಿಂದ ತನ್ನನ್ನು ಹೊರಗಿಡುವಂತೆ ಕೋರಿ ಪದ್ಮನಾಭಸ್ವಾಮಿ ದೇಗುಲ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿ ಸಂಬಂಧ ಕಳೆದ ವರ್ಷ ನೀಡಿದ್ದ ಆದೇಶವನ್ನು ಕಾಯ್ದಿರಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries