HEALTH TIPS

ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಅರ್ಜಿ ವಜಾಗೊಳಿಸಿದ ಕೋರ್ಟ್

                   ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರ ಆರೆಸ್ಸೆಸ್ ವಿರೋಧಿ ಭಾಷಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿದೆ. ರಾಹುಲ್‌ ಗಾಂಧಿ ಭಾಷಣಕ್ಕೆ ಸಂಬಂಧಿಸಿದಂತೆ ಥಾಣೆಯ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಕುಂಟೆ ಅವರು ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿದ ನ್ಯಾ. ರೇವತಿ ಮೊಹಿತೆ ಡೆರೆ ಅವರು ಥಾಣೆಯ ಭಿವಾಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದರು.

               ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಗೆ ಹಿಂದೂ ಸಂಘಟನೆ ಆರ್‌ಎಸ್‌ಎಸ್‌ ಕಾರಣ ಎಂದು 2014ರಲ್ಲಿ ರಾಹುಲ್‌ ಮಾಡಿದ್ದರೆನ್ನಲಾದ ಮಾನಹಾನಿಕರ ಭಾಷಣಕ್ಕೆ ಸಂಬಂಧಿಸಿದಂತೆ ರಾಜೇಶ್‌ ಕುಂಟೆ ಭಿವಾನಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅವರ ಭಾಷಣ ಮಾಡಿದ್ದರ ಬಗ್ಗೆ ಒಪ್ಪಿಕೊಳ್ಳಬೇಕು ಇಲ್ಲವೇ ನಿರಾಕರಿಸಬೇಕು ಎಂದು ಕೋರಿ ಕುಂಟೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಿರಸ್ಕರಿಸಿತ್ತು.

               ಇತ್ತ ಕ್ರಿಮಿನಲ್ ದೂರು ರದ್ದುಗೊಳಿಸಬೇಕೆಂದು ಕೋರಿ ರಾಹುಲ್‌ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ ತಮ್ಮ ರಿಟ್ ಅರ್ಜಿಯಲ್ಲಿ ಅವರು ಭಾಷಣದ ಲಿಪ್ಯಂತರ ಪ್ರತಿಯನ್ನೂ ಸಲ್ಲಿಸಿದ್ದರು. ರಾಹುಲ್‌ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದರೂ, ಕುಂಟೆ ಅವರು, ''ತಮ್ಮ ಭಾಷಣದ ಪ್ರತಿಯನ್ನು ಅರ್ಜಿಯಲ್ಲಿ ಲಗತ್ತಿಸುವ ಮೂಲಕ, ರಾಹುಲ್‌ ಅವರ ಬಳಿ ಭಾಷಣವನ್ನು ಒಪ್ಪಿಕೊಂಡಿದ್ದಾರೆ. ಅರ್ಜಿಯಲ್ಲಿ ಅವರು ವಿವಿಧ ಕಾರಣಗಳಿಗಾಗಿ ಭಾಷಣವನ್ನು ಸಮರ್ಥಿಸಲು ಪ್ರಯತ್ನಿಸಿದ್ದರು" ಎಂದು ಅವರು ಪ್ರತಿಪಾದಿಸಿದರು. ವಕೀಲ ತಪನ್ ಥಟ್ಟೆ ಅವರು ಹೈಕೋರ್ಟ್‌ನಲ್ಲಿ ಕುಂಟೆ ಅವರನ್ನು ಪ್ರತಿನಿಧಿಸಿದ್ದರು.

           ರಾಹುಲ್‌ ಪರ ವಾದ ಮಂಡಿಸಿದ ವಕೀಲ ಕುಶಾಲ್‌ ಮೊರ್‌, ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತು ಹಾಳುಗೆಡಹುವ ಉದ್ದೇಶದಿಂದ ಮನವಿ ಸಲ್ಲಿಸಲಾಗಿದೆ ಎಂದು ವಾದಿಸಿದರು. 2019ರಿಂದಲೂ ಪ್ರಸ್ತುತ ಅರ್ಜಿಯ ವಿಚಾರಣೆಗೆ ಕುಂಟೆ ಯಾವುದೇ ಪ್ರಯತ್ನ ಮಾಡಲಿಲ್ಲ. ಭಾಷಣದ ಲೇಖನ ಪ್ರತಿ ಅರ್ಜಿದಾರರ (ಕುಂಟೆ) ಸೃಷ್ಟಿಯಾಗಿದೆ ಎಂದು ಮೊರ್‌ ವಾದಿಸಿದ್ದು ಅದನ್ನು ವಿಚಾರಣೆಯ ಸಮಯದಲ್ಲಿ ಸಾಬೀತುಪಡಿಸಲಾಗುವುದು ಎಂದು ತಿಳಿಸಿದ್ದರು.

             ಕೋರ್ಟಿಗೆ ಹಾಜರಾಗಿದ್ದ ರಾಹುಲ್: ಲೋಕಸಭೆ ಚುನಾವಣೆ ವೇಳೆ ನೀಡಿದ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು.ರಾಹುಲ್ ಅವರಿಗೆ ನ್ಯಾಯಾಲಯದಿಂದ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ರಾಹುಲ್ ಗಾಂಧಿ ಅವರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಅರ್ಜಿ ತಿರಸ್ಕರಿಸಿದ್ದರಿಂದ ಈ ಪ್ರಕರಣದ ವಿಚಾರಣೆಗಾಗಿ ಭಿವಾಂಡಿ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಅವರು ಖುದ್ದು ಹಾಜರಾಗಿದ್ದರು.

                              ವಿಚಾರಣೆ, ಕೋರ್ಟ್ ಪರಿಗಣಿಸಿದ ಅಂಶಗಳು:

             ನ್ಯಾಯವಾದಿ ಸುದೀಪ್ ಪಾಸ್ಬೋಲಾ ಮತ್ತು ಮೊರ್ ಇದು ಕ್ರಿಮಿನಲ್ ನ್ಯಾಯಶಾಸ್ತ್ರದ(jurisprudence) ಒಂದು ಮೂಲ ತತ್ವವಾಗಿದ್ದು, ಕ್ರಿಮಿನಲ್ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ತನ್ನ ನಿಲುವಿಗೆ ಬದ್ಧವಾಗಿ ನಿಲ್ಲಬೇಕು ಮತ್ತು ಈ ತತ್ವವನ್ನು ಅನುಮತಿಸಲಾಗುವುದಿಲ್ಲ ಎಂದು ವಾದಿಸಿದರು.

              ವಿಚಾರಣಾ ನ್ಯಾಯಾಲಯದ ಮುಂದೆ ಕುಂಟೆಯವರು ತಮ್ಮ ದೂರಿಗೆ ಲಗತ್ತಿಸಿದ 'ಸಿಡಿ'ಯ ವಿಷಯಗಳ ಬಗ್ಗೆ ಉಲ್ಲೇಖಿಸಿದರು. ರಾಹುಲ್ ಗಾಂಧಿಯವರು ಮಾಡಿದ ಭಾಷಣದ ಸಿಡಿಯನ್ನು ಸ್ವತಃ ಕುಂತೆಯವರು ಕ್ರಿಮಿನಲ್ ದೂರಿನೊಂದಿಗೆ ಸೇರಿಸಿದ್ದಾರೆ ಎಂದು ಅವರು ಹೇಳಿದರು, ಅದರ ಅನುಸಾರವಾಗಿ, ಆ ಸಿಡಿಯ ಪ್ರತಿಲಿಪಿಯನ್ನು ರಾಹುಲ್ ಗಾಂಧಿ ಅವರ ರಿಟ್ ಅರ್ಜಿಗೆ ಲಗತ್ತಿಸಲಾಗಿದೆ. ಆದೇಶ ಹೊರಡಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಲ್ಲಿಸಲಾಗಿದೆ.

             ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ "ಒಬ್ಬ ಆರೋಪಿಯನ್ನು (ರಾಹುಲ್ ಗಾಂಧಿ) ಯಾವುದೇ ದಾಖಲೆಯನ್ನು ಒಪ್ಪಿಕೊಳ್ಳಲು/ನಿರಾಕರಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಆರೋಪಿಯು ಮೌನವಾಗಿ ಉಳಿಯುವ ಹಕ್ಕು ಭಾರತದ ಸಂವಿಧಾನದ ಪರಿಚ್ಛೇದ 20 (3) ರಿಂದ ಸಿಗಲಿದೆ. ಇದು ಕ್ರಿಮಿನಲ್ ವಿಚಾರಣೆಯ ಪವಿತ್ರತೆ(sacrosanct) ಭಾಗವಾಗಿದೆ. ಯಾವುದೇ ನ್ಯಾಯಾಲಯವು ಆರೋಪಿಯನ್ನು ಯಾವುದೇ ದಾಖಲೆಯನ್ನು ಒಪ್ಪಿಕೊಳ್ಳಲು/ನಿರಾಕರಿಸುವಂತೆ ಒತ್ತಾಯಿಸಲು ಅಥವಾ ನಿರ್ದೇಶಿಸಲು ಸಾಧ್ಯವಿಲ್ಲ. ಇದು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 294 ರ ಅಡಿಯಲ್ಲಿ ಶಾಸಕಾಂಗದ ಉದ್ದೇಶವೂ ಅಲ್ಲ ಎಂದರು.

             ಇನ್ನೊಂದು ಪ್ರಕರಣದಲ್ಲಿ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಈ ಕೇಸಿನಲ್ಲಿ ಸದ್ಯ ರಿಲೀಫ್ ಪಡೆದುಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries