ಕಾಸರಗೋಡು: ದೇಶ ಕಾಯುವ ಸೈನಿಕರು ಮತ್ತು ಕೃಷಿಕರಲ್ಲಿ ಆತ್ಮವಿಶ್ವಾಸದೊಂದಿಗೆ ಕಾರ್ಯಾಚರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲ ರೀತಿಯ ನೆರವು ಕಲ್ಪಿಸಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಂಜಿತ್ ತಿಳಿಸಿದ್ದಾರೆ.
ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೃಷಿಕ ಮೋರ್ಚಾ ಜಿಲ್ಲಾ ಸಮಿತಿ ಶುಕ್ರವಾರ ಆಯೋಜಿಸಿದ್ದ'ಕಿಸಾನ್-ಜವಾನ್ ಸಮ್ಮಾನ್'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಯೋಧರನ್ನು ಮತ್ತು ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಕೃಷಿಕ ಮೋರ್ಚಾ ಜಿಲ್ಲಾಧ್ಯಕ್ಷ ಕುಞÂಕಣ್ಣನ್ ಬಳಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಉತ್ತರ ವಲಯ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಸುಧಾಮ ಗೋಸಾಡ, ಎನ್. ಸತೀಶ್ ಉಪಸ್ಥಿತರಿದ್ದರು. ಜಯಕುಮಾರ್ ಮಾನಡ್ಕ ಸ್ವಾಗತಿಸಿ, ಚಂದು ಮಾಸ್ತರ್ ವಂದಿಸಿದರು.





