ಬದಿಯಡ್ಕ: ದುರ್ಗಾಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ ಇವರು ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮದಲ್ಲಿ ಒಂದು ದಿನ ಶ್ರಮದಾನವನ್ನು ನಡೆಸಿಕೊಟ್ಟರು. ಕ್ಲಬ್‍ನ ಸದಸ್ಯರು ಪರಿಸರದ ಕಾಡು ಪೊದೆಗಳನ್ನು ತೆರವುಗೊಳಿಸಿದರು. ಆಶ್ರಮದ ಮಧ್ಯಾಹದೂಟವನ್ನು ಪ್ರಾಯೋಜಿಸಿರುವುದಲ್ಲದೆ 15 ಊಟದ ತಟ್ಟೆಗಳನ್ನು ದೇಣಿಗೆಯಾಗಿ ನೀಡಿದರು. ಆಶ್ರಮದ ಪದಾಕಾರಿಗಳು ಹಾಗೂ ಕ್ಲಬ್‍ನ ಸದಸ್ಯರು ಪಾಲ್ಗೊಂಡಿದ್ದರು.





