ಕಾಸರಗೋಡು: ರಾಜ್ಯದ ಕೆಲವೆಡೆ ಕೆಲವು ವಾಹನಗಳನ್ನು ರೂಪಾಂತರಗೊಳಿಸಿ ಆಂಬುಲೆನ್ಸ್ ಆಗಿ ಸೇವೆ ಸೇವೆ ಸಲ್ಲಿಸಲಾಗುತ್ತಿರುವುದು ಗಮನಕ್ಕೆ ಬಂದಿದ್ದು, ಇಂಥಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಸಂಚಾರಿ ಸಚಿವ ಆಂಟನಿ ರಾಜು ತಿಳಿಸಿದರು.
ತಿರುವನಂತಪುರಂ ನಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಅಧಿಕಾರಿ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತಿಳಿಸಲಾಗಿದೆ.
ಕೋವಿಡ್ ಮಹಾಮಾರಿಯ ಪ್ರತ್ಯೇಕ ಹಿನ್ನೆಲೆಯ ಆಂಬುಲೆನ್ಸ್ ಗಳು ಎಂಬ ನೆವದಲ್ಲಿ ಈ ಸೇವೆ ನಡೆಸಲಾಗುತ್ತಿದೆ ಎಂಬ ದೂರುಗಳು ಲಭಿಸುತ್ತಿವೆ. ಆಂಬುಲೆನ್ಸ್ ಚಾಲಕರಿಗೆ ಪೆÇಲೀಸ್ ವೇರಿಫಿಕೇಷನ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಲೂ ಸಭೆ ತೀರ್ಮಾನಿಸಿದೆ.

