ಕಾಸರಗೋಡು: ಹೂದೋಟ, ಹಲ್ಲುಹಾಸು, ಆಟದ ಮೈದಾನ ಇತ್ಯಾದಿಗಳ ಮೂಲಕ ಈಸ್ಟ್ ಎಳೇರಿ ಗ್ರಾಮ ಪಂಚಾಯತ್ ನ ಕಡುಮೇನಿ ಅನಿಲ ಸ್ಮಶಾನ ಇತರೆಡೆಗಿಂತ ವಿಭಿನ್ನವಾಗಿ ಕಂಡುಬರುತ್ತಿದೆ.
ಕಾಡು ಪೆÇದೆಗಳಿಂದ ತುಂಬಿ ಭಯಾನಕ ವಾತಾವರಣ ಸೃಷ್ಟಿಸುವ ಸಾಧಾರಣ ಗತಿಯ ಸ್ಮಶಾನಗಳಿಗಿಂತ ಇದನ್ನು ವಿಭಿನ್ನವಾಗಿಸುವಲ್ಲಿ ಗ್ರಾಮ ಪಂಚಾಯತ್ ಆಡಳಿತೆ ಸಮಿತಿ ಈ ಕ್ರಮ ಕೈಗೊಂಡಿದೆ. ಅತ್ಯಾಧುನಿಕ ರೀತಿಯ ಶವಸಂಸ್ಕಾರಗಳ ಸೌಲಭ್ಯ, ಮಲಿನ ಜಲ ಸಂಸ್ಕರಣೆ, ಮರಣಾನಂತರ ಚಟುವಟಿಕೆಗಳಿಗೆ ಬೇಕಾದ ಸೌಲಭ್ಯಗಳೊಂದಿಗೆ ಹೂದೋಟ, ಹುಲ್ಲುಹಾಸು, ಆಟದ ಮೈದಾನ ಇತ್ಯಾದಿಗಳು ಸ್ಮಶಾನದ ವಾತಾರವೃಣವನ್ನು ಮನೋಹರವಾಗಿಸಿದೆ.
85 ಲಕ್ಷ ರೂ. ವೆಚ್ಚದಲ್ಲಿ 15ನೇ ವಾರ್ಡ್ ಆಗಿರುವ ಕಡುಮೇನಿಯಲ್ಲಿ ಶಾಂತಿತೀರಂ ಎಂಬ ಹೆಸರಿನ ಸ್ಮಶಾನವನ್ನು ಈಸ್ಟ್ ಎಳೆರಿ ಗ್ರಾಮ ಪಂಚಾಯತ್ ನಿರ್ಮಿಸಿದೆ. ದಿನವೊಂದಕ್ಕೆ ಮೂರು ತಾಸುಗಳ ಅಂತರದಲ್ಲಿ 5 ಶವಸಂಸ್ಕಾರಗಳು ಸಾಧಾರಣ ಗತಿಯಲ್ಲಿ ಇಲ್ಲಿ ನಡೆಯುತ್ತವೆ. ಪರಿಶಿಷ್ಟ ಜಾತಿ-ಪಂಗಡದ ಮಂದಿಗೆ ಉಚಿತವಾಗಿ ಇಲ್ಲಿ ಶವಸಂಸ್ಕಾರ ನಡೆಸಲಾಗುತ್ತದೆ. ಶವಸಂಸ್ಕಾರ ನಡೆಸಲು ಪ್ರತ್ಯೇಕ ಜನ ಇಲ್ಲಿ ಕರ್ತವ್ಯದಲ್ಲಿದ್ದಾರೆ.

