HEALTH TIPS

ಜಿಲ್ಲಾ ಆಸ್ಪತ್ರೆಗಾಗಿ ಸಿದ್ಧಗೊಳ್ಳುತ್ತಿದೆ ಸೂಪರ್ ಸ್ಪೆಷ್ಯಾಲಿಟಿ ಸೌಲಭ್ಯಗಳ ಮಾಸ್ಟರ್ ಪ್ಲಾನ್

                                             

                  ಕಾಸರಗೋಡು: ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗಾಗಿ ಸೂಪರ್ ಸ್ಪೆಷ್ಯಾಲಿಟಿ ಸೌಲಭ್ಯಗಳ ಮಾಸ್ಟರ್ ಪ್ಲಾನ್ ಸಿದ್ಧಗೊಳ್ಳುತ್ತಿದೆ. 

                  ಜಿಲ್ಲೆಯ ಸಾರ್ವಜನಿಕ ಆರೋಗ್ಯ ವಲಯದ ಪರಿಣತ ಚಿಕಿತ್ಸೆ ಗಿರಿಉವ ಏಕ ಆಸ್ಪತ್ರೆಯಾಗಿರುವ ಜಿಲ್ಲಾ ಆಸ್ಪತ್ರೆಯ ಏಳಿಗೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿ ಈ ಮಾಸ್ಟರ್ ಪ್ಲಾನ್ ತಯಾರಾಗುತ್ತಿದೆ. 

                              ತನ್ನ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಮಟ್ಟದ ಅಂಗೀಕಾರ ಪಡೆದಿರುವ ಕೇರಳ ರಾಜ್ಯದ ಏಕೈಕ ಜಿಲ್ಲಾ ಆಸ್ಪತ್ರೆಯೆಂಬ ಹೆಗ್ಗಳಿಕೆ ಪಡೆದಿರುವ ಈ ಸಂಸ್ಥೆ ಅತ್ಯಧಿಕ ಪ್ರಮಾಣದಲ್ಲಿ ಇಲ್ಲಗಳ ಆಗರವಾಗಿ, ಜಾಗದ ಪರಿಮಿತಿಗಳಿಂದ ಬಳಲುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ರಚಿಸಲಾಗುತ್ತಿದೆ. 

                 ಸೂಪರ್ ಸ್ಪೆಷ್ಯಾಲಿಟಿ ಸೌಲಭ್ಯಗಳಾದಸ ಕಾರ್ಡಿಯಾಲಜಿ, ನೆಫ್ರಾಲಜಿ, ನ್ಯೂರಾಲಜಿ, ಅತ್ಯಾಧುನಿಕ ಆಪರೇಷನ್ ಸೌಲಭ್ಯಗಳು, ಇನ್ನಿತರ ಸೂಪರ್ ಸ್ಪಷ್ಯಾಲಿಟಿ ಸೇವೆಗಳು ಹೀಗೆ ಸಮಗ್ರ ಅಭಿವೃದ್ಧಿಯ ಬಗ್ಗೆ ದೃಷ್ಟಿಯಿರುವ ಮಾಸ್ಟರ್ ಪ್ಲಾನ್ ಸಿದ್ಧಗೊಳ್ಳುತ್ತಿದೆ. ಮಾಸ್ಟರ್ ಪ್ಲಾನ್ ಸಿದ್ಧತೆಯಲ್ಲಿ ಪರಿಣತಿಹೊಂದಿರುವ ಏಜೆನ್ಸಿಯಾಗಿರುವ ಕಿಡ್ಕೋ ಈ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ. 

             ಮಾಸ್ಟರ್ ಪ್ಲಾನ್ ಸಿದ್ಧತೆ ಸಂಬಂಧ ಸಭೆ ಜಿಲ್ಲಾ ಆಸ್ಪತ್ರೆಯಲ್ಲಿ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಷಾನವಾಸ್ ಪಾದೂರು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಸರಿತಾ, ಜಿಲ್ಲಾ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries