HEALTH TIPS

ವಿಶ್ವ ಕುಸ್ತಿ ಚಾಂಪಿಯನ್ ಶಿಪ್; ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಅಂಶು ಮಲಿಕ್!

               ಓಸ್ಲೋವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿ ಕುಸ್ತಿಪಟು ಅಂಶು ಮಲಿಕ್ ಹೊರಹೊಮ್ಮಿದ್ದಾರೆ. ನಾರ್ವೆಯ ಓಸ್ಲೋದಲ್ಲಿ ಗುರುವಾರ ನಡೆದ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ 2016ರ ಒಲಿಂಪಿಕ್ ಚಾಂಪಿಯನ್ ಹೆಲೆನ್ ಲೌಸಿ ಮಾರೌಲಿ ವಿರುದ್ಧ ಸೋಲುವ ಮೂಲಕ ಅಂಶು ಮಲಿಕ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.

            ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊದಲ ಮಹಿಳಾ ಫೈನಲಿಸ್ಟ್ ಆದ ನಂತರ ಇಂದು ನಡೆದ ಪಂದ್ಯದಲ್ಲಿ 19ರ ಹರೆಯದ ಯುವತಿ ಮೊದಲಿಗೆ ಆಕ್ರಮಣಕಾರಿ ಶೈಲಿಯಲ್ಲಿ ಆಟವಾಡಿದರು. ಆರಂಭದಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು, ಆದರೆ, ಸೆಕೆಂಡಿನಲ್ಲಿಯೇ ಪಂದ್ಯವು ನಾಟಕೀಯ ಶೈಲಿಯಲ್ಲಿ ಬದಲಾಯಿತು.

              ಮೌರೌಲಿ ತನ್ನ ತೋಳಿತ ಹಿಡಿತದಲ್ಲಿ ಅಂಶು ಮಲ್ಲಿಕ್ ಅವರನ್ನು ಪಡೆದು 2-1 ಅಂತರದಲ್ಲಿ ಮುನ್ನಡೆ ಸಾಧಿಸಿದಳು. ತದನಂತರ ಅಂಶುವಿನ ಬಲಗೈಯನ್ನು ಬಿಗಿಯಾಗಿ ಹಿಡಿದುಕೊಂಡು 4-1 ಅಂಕ ಪಡೆದುಕೊಳ್ಳುವುದರೊಂದಿಗೆ ಗೆಲುವು ಸಾಧಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries