ಬದಿಯಡ್ಕ: ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಬದಿಯಡ್ಕ ಮಂಡಲ ಮಟ್ಟದ ರಾಜೀವ ಗಾಂಧಿ ಯೂನಿಟ್ ಸಮಿತಿ ರೂಪೀಕರಣ ನೀರ್ಚಾಲು ಮಾಡತ್ತಡ್ಕ ದಲ್ಲಿ ಜರಗಿತು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಯುವಕಾಂಗ್ರೆಸ್ ಮಂಡಲ ಅಧ್ಯಕ್ಷ ಶಾಫಿ ಪಯ್ಯಲಡ್ಕ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮನಾಫ್ ನುಳ್ಳಿಪಾಡಿ, ಪುಳ್ಳೂರ್ ಪೆರಿಯ ಜನಪ್ರತಿನಿಧಿ ರತೀಶ್ ಕುಮಾರ್, ಬದಿಯಡ್ಕ ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕುಂಜಾರು ಮೊಮ್ಮದ್ ಹಾಜಿ, ಕಾಸರಗೋಡು ಮಂಡಲ ಅಧ್ಯಕ್ಷ ಮ್ಯಾಥ್ಯೂಸ್ ಬದಿಯಡ್ಕ, ಕಾಂಗ್ರೆಸ್ ಅಧ್ಯಾಪಕ ಸಂಘಟನೆಯ ನೇತಾರ ನಿರಂಜನ ರೈ ಪೆರಡಾಲ, ವಾರ್ಡ ಅಧ್ಯಕ್ಷ ಜಾನಿ ಡಿಸೋಜ, ಜಯಪ್ರಕಾಶ್, ವಸಂತ ಮಾತನಾಡಿದರು.
ಯುವಕಾಂಗ್ರೆಸ್ ಮಂಡಲ ಪದಾಧಿಕಾರಿಗಳಾದ ರವೀಂದ್ರ ಕುಂಟಾಲ ಮೂಲೆ, ಶ್ರೀನಾಥ್ ಬದಿಯಡ್ಕ, ಮನೋಜ್, ವಾರ್ಡು ಕಾರ್ಯಕರ್ತರು, ಕೆ ಎಸ್ ಯು ಕಾರ್ಯಕರ್ತರು ಉಪಸ್ಥಿತರಿದ್ದರು. ನೂತನ ಯೂನಿಟ್ ಸಮಿತಿ ರೂಪಿಕರಿಸಲಾಯಿತು. ಕಾರ್ಯದರ್ಶಿ ಅಜಿತ್ ಸ್ವಾಗತಿಸಿ, ಸೈಫುದ್ದೀನ್ ವಂದಿಸಿದರು.

