HEALTH TIPS

ಉತ್ತರಪ್ರದೇಶದ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

       ನವದೆಹಲಿ: ಉತ್ತರ ಪ್ರದೇಶದ ಕುಶಿನಗರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಉದ್ಘಾಟನೆ ಮಾಡಿದ್ದಾರೆ. 

       ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಜೂನ್ 2020 ರಲ್ಲಿ ಅನುಮೋದನೆ ನೀಡಿತ್ತು. 

     ಕುಶಿನಗರ ವಿಮಾನ ನಿಲ್ದಾಣವು ಶ್ರಾವಸ್ತಿ, ಕಪಿಲವಸ್ತು, ಲುಂಬಿನಿ (ಕುಶಿನಗರವು ಬೌದ್ಧ ಸಾಂಸ್ಕೃತಿಕ ತಾಣ) ನಂತಹ ಹಲವಾರು ಬೌದ್ಧ ಸಾಂಸ್ಕೃತಿಕ ತಾಣಗಳ ಹತ್ತಿದಲ್ಲಿದೆ. ಕುಶಿನಗರ ವಿಮಾನ ನಿಲ್ದಾಣವನ್ನು "ಅಂತರಾಷ್ಟ್ರೀಯ ವಿಮಾನ ನಿಲ್ದಾಣ" ವಾಗಿ ಘೋಷಣೆ ಮಾಡಿರುವುದು ಇತರೆ ರಾಷ್ಟ್ರಗಳೊಂದಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಧಾರಿತ ಸಂಪರ್ಕವನ್ನು ನೀಡುತ್ತದೆ. ಅಲ್ಲದೆ, ದೇಶೀಯ/ಅಂತರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

          ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಶಕಗಳ ಭರಸವೆ, ನಿರೀಕ್ಷೆಗಳ ಫಲಿತಾಂಶ: ಪ್ರಧಾನಿ ಮೋದಿ

      ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಶಕಗಳ ಭರವಸೆ ಮತ್ತು ನಿರೀಕ್ಷೆಗಳ ಫಲಿತಾಂಶವಾಗಿದೆ. ಪೂರ್ವಾಂಚಲದಿಂದ ಚುನಾಯಿತ ಪ್ರತಿನಿಧಿಯಾಗಿ, ಇದು ಜನರಿಗೆ ಬದ್ಧತೆಯನ್ನು ಪೂರೈಸುವ ಸಮಯವಾಗಿತ್ತು ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. 

       ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿರುವ ಪ್ರಧಾನಿ ಮೋದಿಯವರು, ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ವಾಯು ಸಂಪರ್ಕವಷ್ಟೇ ಅಲ್ಲ, ರೈತರು, ಪಶು ಪಾಲಕರು, ಅಂಗಡಿಯವರು, ಕಾರ್ಮಿಕರು, ಸ್ಥಳೀಯ ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ವ್ಯಾಪಾರದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪ್ರವಾಸೋದ್ಯಮವು ಗರಿಷ್ಠ ಲಾಭವನ್ನು ಪಡೆಯುತ್ತದೆ, ಅಲ್ಲದೆ, ಇಲ್ಲಿನ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. 

      ಇಂದು ನನ್ನ ಸಂತೋಷ ಎರಡು ಪಟ್ಟು ಹೆಚ್ಚಾಗಿದೆ. ನನ್ನಲ್ಲಿನ ಆಧ್ಯಾತ್ಮಿಕ ಪ್ರಯಾಣದ ಬಗೆಗಿನ ಕುತೂಹಲ ಹೆಚ್ಚಾಗಿದ್ದು, ವಿಮಾನ ನಿಲ್ದಾಣದ ಉದ್ಘಾಟನೆ ಸಂತೃಪ್ತಿಯ ಭಾವನೆಯನ್ನು ತಂದಿದೆ. ಪೂರ್ವಾಂಚಲದ ಪ್ರತಿನಿಧಿಯಾಗಿ, ಬದ್ಧತೆಯ ನೆರವೇರಿಕೆಗೆ ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries