ಕಾಸರಗೋಡು: ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಲಯದಲ್ಲಿ ಹುದ್ದೆಗಳು ತೆರವಾಗಿದ್ದು, ನೇಮಕಾತಿ ಸಂಬಂಧ ವಿವಿಧ ಹುದ್ದೆಗಳಿಂದ ನಿವೃತ್ತರಾದ ನ್ಯಾಯಾಲಯ ಸಿಬ್ಬಂದಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ ಅಸಿಸ್ಟೆಂಟ್ ಯಾ ಎಲ್.ಡಿ.ಟೈಪಿಸ್ಟ್( ಒಂದು ಹುದ್ದೆ), ಆಫೀಸ್ ಅಸಿಸ್ಟೆಂಟ್( ಎರಡು ಹುದ್ದೆಗಳು) ಹುದ್ದೆಗಳಿಗೆ ಪಿ.ಎಸ್.ಸಿ. ಪರಿಶೀಲಿಸುವ ಅರ್ಹತೆ ಮತ್ತು 5 ವರ್ಷಗಳ ವೃತ್ತಿ ಅನುಭವ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಅ.18ರ ಮುಂಚಿತವಾಗಿ ವಯೋಮಾನ, ಅರ್ಹತೆ ಖಚಿತಪಡಿಸುವ ದಾಖಲೆ ಪತ್ರಗಳ ಸ್ವಯಂ ದೃಡೀಕರಿಸಿದ ನಕಲುಗಳ ಸಹಿತ ಅರ್ಜಿಗಳನ್ನು ಜಿಲ್ಲಾ ಜಡ್ಡ್, ಜಿಲ್ಲಾ ನ್ಯಾಯಾಲಯ, ಕಾಸರಗೋಡು-671123 ಎಂಬ ವಿಳಾಸಕ್ಕೆ ನೇರವಾಗಿ ಯಾ ಅಂಚೆ ಮುಖಾಂತರ ಸಲ್ಲಿಸಬೇಕು. ಲಕೋಟೆಯ ಹೊರಗಡೆ ತಾತ್ಕಾಲಿಕ ಹುದ್ದೆಗಿರುವ ಅರ್ಜಿ ಎಂದು ನಮೂದಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

