ಕುಂಬಳೆ: ಕೇರಳವನ್ನು ಮರುಗಳಿಸಿ ಎಂಬ ಸಂದೇಶದೊಂದಿಗೆ ಯುಡಿಎಫ್ ನೇತೃತ್ವದಲ್ಲಿ ವಿರೋಧ ಪಕ್ಷ ನಾಯಕ ವಿ.ಡಿ.ಸತೀಶನ್ ನಾಯಕತ್ವದಲ್ಲಿ ನಡೆಯುವ ನವಯುಗ ಯಾತ್ರೆಗೆ ಇಂದು(ಫೆ.6) ಸಂಜೆ 4ಕ್ಕೆ ಕುಂಬಳೆ ಪೇಟೆಯಿಂದ ಚಾಲನೆ ನೀಡಲಾಗುವುದು.
ಈ ಯಾತ್ರೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉದ್ಘಾಟಿಸುವರು. ಯುಡಿಎಫ್‍ನ ಎಲ್ಲಾ ಘಟಕ ಪಕ್ಷಗಳ ನೇತಾರರು ಇದರಲ್ಲಿ ಭಾಗವಹಿಸುವರು.
ಯಾತ್ರೆಗೆ ರಾತ್ರಿ 7ಕ್ಕೆ ಕಾಸರಗೋಡಿನಲ್ಲಿ ಭವ್ಯ ಸ್ವಾಗತ ನೀಡಲಾಗುವುದು. ಫೆ.7 ರಂದು ಬೆಳಿಗ್ಗೆ 10ಕ್ಕೆ ಉದುಮ, 11 ಗಂಟೆಗೆ ಹೊಸದುರ್ಗ, 12 ಗಂಟೆಗೆ ತೃಕರಿಪುರದಲ್ಲಿ ಸ್ವಾಗತ ನೀಡಲಾಗುವುದು. ನಂತರ ಯಾತ್ರೆ ಕಣ್ಣೂರು ಜಿಲ್ಲೆಗೆ ಪ್ರವೇಶಿಸಲಿದೆ. ಯಾತ್ರೆಯಂಗವಾಗಿ ದೈನಂದಿನ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪಾಲ್ಗೊಳ್ಳಿಸಿ ಸಂವಾದ ಕಾರ್ಯಕ್ರಮಗಳು ನಡೆಯಲಿದೆ.
ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಗೆದ್ದು ಅಧಿಕಾರಕ್ಕೇರುವಂತೆ ಮಾಡುವ ಒಂದು ಜನ ಮುನ್ನಡೆ ಯಾತ್ರೆ ಈ ನವಯುಗ ಯಾತ್ರೆ ಎಂದು ನೇತಾರರು ತಿಳಿಸಿದ್ದಾರೆ.

