HEALTH TIPS

ನಾಗರಿಕರಿಗೆ ಕಿರಿಕಿರಿ: ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಕೆ ವಿರುದ್ಧ ಪೋಲೀಸರಿಂದ ಕ್ರಮಕ್ಕೆ ಚಾಲನೆ

ಮಂಜೇಶ್ವರ: ಸಮಾರಂಭ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಕ್ರಮಕೈಗೊಳ್ಳಲು ಪೋಲೀಸರು üತೀರ್ಮಾನಿಸಿದ್ದಾರೆ. ಈ ಹಿಂದೆಯೇ ಈ ಆದೇಶವಿದ್ದರೂ ಯಾರೂ ಪಾಲಿಸುತ್ತಿರಲಿಲ್ಲ. ಆದರೆ ಅಪರಿಮಿತ ಶಬ್ದದಿಂದ ಕಿರಿ ಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೂರು ವ್ಯಾಪಕಗೊಂಡಿರುವುದರಿಂದ ಪೋಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. 

ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಸಿದ್ದಲ್ಲಿ ಅದನ್ನು ವಶಪಡಿಸಿ ಅವರ ವಿರುದ್ದ ಕ್ರಮಕೈಗೊಳ್ಳಲು ಎಲ್ಲಾ ಠಾಣೆಗಳಿಗೆ ಆದೇಶ ನೀಡಲಾಗಿದೆ. ಇದರಂತೆ ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಕಾಲದಲ್ಲಿ ಗಸ್ತು ನಡೆಸುವುದನ್ನು ಬಿಗುಗೊಳಿಸಲಾಗಿದೆ. ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಅಥವಾ ಪೋಲೀಸರ ನೇರ ಗಮನಕ್ಕೆ ಬಂದಲ್ಲಿ ಕಸ್ಟಡಿಗೆ ತೆಗೆದು ಕ್ರಮಕೈಗೊಳ್ಳುವುದಾಗಿ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಪಿ.ಅಜಿತ್ ಕುಮಾರ್ ತಿಳಿಸಿದ್ದಾರೆ. Flat design do not disturb sign illustration




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries