ಬದಿಯಡ್ಕ: ಸೇವಾ ಭಾರತಿ ಬದಿಯಡ್ಕ ಪಂಚಾಯತಿ ಘಟಕದ ನೇತೃತ್ವದಲ್ಲಿ ಫೆ.8 ರಂದು ಭಾನುವಾರ, ಸರ್ಕಾರಿ ಜನರಲ್ ಆಸ್ಪತ್ರೆ ಕಾಸರಗೋಡು ಇವರ ಸಹಭಾಗಿತ್ವದೊಂದಿಗೆ ನೀರ್ಚಾಲಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬ್ಲಡ್ ಬ್ಯಾಂಕ್ ಕಾಸರಗೋಡು ಇದರ ವೈದ್ಯರು ಸಿಬ್ಬಂದಿ ವರ್ಗದವರು ಸಹಕರಿಸಲಿರುವರು. ರಕ್ತದಾನ ಶಿಬಿರದಲ್ಲಿ ಸಾಮಾಜಿಕ ಕಳಕಳಿಯಿರುವ ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸೇವಾ ಭಾರತಿ ಬದಿಯಡ್ಕ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

