ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ, ಲಸಿಕೆಯ ಮಹತ್ವನ್ನು ಜನರು ಅರಿತಿರುವುದರಿಂದ ಜನ ಜಾಗೃತಿಯ ಅವಶ್ಯಕತೆ ಕಮ್ಮಿಯಾಗುತ್ತಿದೆ. ಇದರ ಜೊತೆಗೆ, ಕೊರೊನಾ ಮಾರ್ಗಸೂಚಿಗಳನ್ನೂ ಕಡೆಗಣಿಸಲಾಗುತ್ತಿದೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳು ಕೊರೊನಾ ನಿರ್ಬಂಧವನ್ನು ಹಿಂದಕ್ಕೆ ಪಡೆದಿದೆ. ಮಾಸ್ಕ್ ಹಾಕಿಕೊಳ್ಳದೇ ಇರುವುದು, ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡುತ್ತಿರುವುದರ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಲೋಕಲ್ ಸರ್ಕಲ್ ಎನ್ನುವ ಸಂಸ್ಥೆ ಕೊರೊನಾ ಮೂರನೇ ಅಲೆಯ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದೆ. ಜನರು ಇದೇ ರೀತಿ ಅಸಡ್ಡೆ, ಅಜಾಗರೂಕತೆಯಿಂದ ಇದ್ದರೆ, ಈ ಸಾಂಕ್ರಾಮಿಕ ರೋಗ ಮತ್ತೆ ಹರಡುವ ಸಾಧ್ಯತೆಯಿದೆ ಎಂದು ಸರ್ವೇಯಲ್ಲಿ ಎಚ್ಚರಿಸಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ ಜನರು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕು, ಮದುವೆಯ ಸೀಸನ್ ಆಗಿರುವುದರಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಆಹ್ವಾನಿಸದೇ, ಕಾರ್ಯಕ್ರಮ ನಡೆಸಿದರೆ ಉತ್ತಮ ಎನ್ನುವ ಅಂಶ ಸಮೀಕ್ಷೆಯಲ್ಲಿ ಬಂದಿದೆ.ಲೋಕಲ್ ಸರ್ಕಲ್ ಸಂಸ್ಥೆ ದೇಶದ 319 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆ:
ಲೋಕಲ್ ಸರ್ಕಲ್ ಸಂಸ್ಥೆ ದೇಶದ 319 ಜಿಲ್ಲೆಗಳ ಹದಿನೇಳು ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಸಮೀಕ್ಷೆಯನ್ನು ಹೊರ ತಂದಿದೆ. ಇದರಲ್ಲಿ ಶೇ. ಅರವತ್ತರಷ್ಟು ಪುರುಷರು ಮತ್ತು ಶೇ. ನಲವತ್ತರಷ್ಟು ಮಹಿಳೆಯರ ಅಭಿಪ್ರಾಯವನ್ನು ಕೇಳಲಾಗಿದೆ. ಲಸಿಕೆ ಹಾಕಿಕೊಂಡಿರುವುದರಿಂದ ಏನೂ ತೊಂದರೆಯಾಗುವುದಿಲ್ಲ ಎನ್ನುವ ಅಭಿಮತವನ್ನು ಶೇ. 76ರಷ್ಟು ಮಂದಿ ಹೊಂದಿದ್ದಾರೆ ಎಂದು ಸರ್ವೇಯಲ್ಲಿ ಹೇಳಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಮದುವೆ:
ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಮದುವೆ:
ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಮದುವೆ ನಡೆಯಲಿದೆ, ದೆಹಲಿ ಒಂದರಲ್ಲೇ ಒಂದೂವರೆ ಲಕ್ಷ ವಿವಾಹ ಸಮಾರಂಭ ನಡೆಯಲಿದೆ. ಇದು ಬಿಟ್ಟು ನಿಶ್ಚಿತಾರ್ಥ ಸೇರಿದಂತೆ ಇತರ ಶುಭ ಕಾರ್ಯಕ್ರಮಗಳು ಇರಲಿವೆ. ಈ ಅವಧಿಯಲ್ಲಿ ಬಹುತೇಕ ಹೆಚ್ಚಿನ ಕಲ್ಯಾಣ ಮಂಟಪಗಳು ಬುಕ್ ಆಗಿವೆ. ಶುಭ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸುತ್ತೇವೆ ಎನ್ನುವ ನಿಲುವನ್ನು ತಾಳಿದ್ದಾರೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಕೊರೊನಾ ಹರಡುವುದಿಲ್ಲ: ಕೆಲವು ತಿಂಗಳ ಹಿಂದೆ ಸಮೀಕ್ಷೆ ನಡೆಸಿದಾಗ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಭಾಗವಹಿಸಿದರೆ ಕೊರೊನಾ ಹರಡಬಹುದು ಎಂದು ಶೇ. 57ರಷ್ಟು ಜನ ನಂಬಿದ್ದರು. ಆದರೆ, ಈ ಸಮೀಕ್ಷೆಯಲ್ಲಿ ಶೇ. ಅರವತ್ತರಷ್ಟು ಜನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಕೊರೊನಾ ಹರಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಕಳೆದ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾಲುಸಾಲು ಹಬ್ಬಗಳು ಇದ್ದರೂ, ಕೊರೊನಾ ಹರಡುವುದು ತೀವ್ರವಾಗಿ ಕಮ್ಮಿಯಾಗಿತ್ತು
ಗ್ರಾಮೀಣ ಭಾಗದಲ್ಲಂತೂ ಜನ ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ!:
ಗ್ರಾಮೀಣ ಭಾಗದಲ್ಲಂತೂ ಜನ ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ!:
ಕೊರೊನಾ ಮೊದಲನೇ ಅಲೆಗೂ ಮುನ್ನ ಯಾವರೀತಿ ಸ್ಥಿತಿಯಿದೆಯೋ ಅದೇ ರೀತಿಯಲ್ಲಿ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಮರುಳಿದೆ. ಗ್ರಾಮೀಣ ಭಾಗದಲ್ಲಂತೂ ಜನ ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ. ಸಾಮಾಜಿಕ ಅಂತರ ಕಾಯುತ್ತಿಲ್ಲ. ಜನ ಇದೇ ರೀತಿ ಗುಂಪುಗುಂಪಾಗಿ ಭಾಗವಹಿಸಿದರೆ ನಾವೇ ತೊಂದರೆಗೆ ಆಹ್ವಾನ ನೀಡಿದಂತೆ. ಹಾಗಾಗಿ, ಜನರು ಇನ್ನಷ್ಟು ದಿನ ಕೊರೊನಾ ಮಾರ್ಗಸೂಚಿ ಪಾಲಿಸಿದರೆ, ಈ ಸಾಂಕ್ರಾಮಿಕ ರೋಗದಿಂದ ಸಂಪೂರ್ಣ ಹೊರಬರಬಹುದು ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಶೇ.50ರಷ್ಟು ಪರಿಣಾಮಕಾರಿಯಾಗಿದೆ, ಲಕ್ಷಣಸಹಿತ ಕೋವಿಡ್ ತಡೆಯುವಲ್ಲಿ ಕೋವ್ಯಾಕ್ಸಿನ್ ಎರಡು ಡೋಸ್‌ಗಳ ಪರಿಣಾಮಕಾರಿತ್ವ ಶೇ.77.8ರಷ್ಟಿದೆ. ಲಸಿಕೆಯ ಸುರಕ್ಷತೆ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಲ್ಯಾನ್ಸೆಟ್ ವರದಿಯಲ್ಲಿ ಹೇಳಲಾಗಿತ್ತು.



