ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 4 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗಲಿವೆ. ಕುಂಬಡಾಜೆ, ಪುಲ್ಲೂರು, ಪರಪ್ಪ, ವೆಸ್ಟ್ ಎಳೆರಿ ಗ್ರಾಮ ಕಚೇರಿಗಳು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಲಿವೆ. ತಲಾ 94 ಲಕ್ಷ ರೂ. ಬಳಸಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ನಿರ್ಮಾಣದ ಹೊಣೆಗಾರಿಕೆ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು.
ನ.25ರಂದು ಬೆಳಗ್ಗೆ 10.30ಕ್ಕೆ ಕುಂಬ್ಡಾಜೆ, ಮಧ್ಯಾಹ್ನ 12 ಗಂಟೆಗೆ ಪುಲ್ಲೂರು, 3 ಗಂಟೆಗೆ ಪರಪ್ಪ, ಸಂಜೆ 4 ಗಂಟೆಗೆ ವೆಸ್ಟ್ ಎಳೆರಿ ಗ್ರಾಮ ಕಚೇರಿಗಳ ಉದ್ಘಾಟನೆ ಜರುಗಲಿವೆ. ಕಂದಾಯ ಸಚಿವ ಕೆ.ರಾಜನ್ ಉದ್ಘಾಟನೆ ನಡೆಸುವರು.



