ಕಾಸರಗೋಡು: ಕನ್ನಡ ಸಾಹಿತ್ಯಪರಿಷತ್ ಕೇರಳ ಗಡಿನಾಡ ಘಟಕ ನೂತನ ಅಧ್ಯಕ್ಷರಾಗಿ ಎಸ್.ವಿ ಭಟ್ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಎಸ್.ವಿ ಭಟ್ ಹಾಗೂ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅವರ ಮಧ್ಯೆ ಸ್ಪರ್ಧೆ ಏರ್ಪಟ್ಟಿದ್ದು, ಎಸ್.ವಿ ಭಟ್ 294ಮತ ಹಾಗೂ ರಾಧಾಕೃಷ್ಣ ಉಳಿಯತ್ತಡ್ಕ 178 ಮತಗಳನ್ನು ಗಳಿಸಿದ್ದಾರೆ. ನ. 21ರಂದು ಮತದಾನ ನಡೆದಿದ್ದು, ಬುಧವಾರ ಬೆಂಗಳೂರಿನಲ್ಲಿ ಮತ ಎಣಿಕೆ ನಡೆದಿದೆ.
ಎಸ್.ವಿ ಭಟ್ ಅವರು ನಾಲ್ಕನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸಿದ್ದಾರೆ. ಸಾಹಿತಿಯೂ ಆಗಿರುವ ಅವರು ಶಿಕ್ಷಕರಾಗಿ, ಉಪ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷರಾಗಿ ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಕನ್ನಡಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗುರುತಿಸಿಕೊಂಡಿದ್ದರು.
ಕನ್ನಡ ಭಾಷೆ, ಸಂಸ್ಕøತಿ, ಸಾಹಿತ್ಯ, ನೆಲ-ಜಲ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಶಕ್ತಿಮೀರಿ ದುಡಿಯುವುದಾಗಿ ಅವರು ತಿಳಿಸಿದ್ದಾರೆ.




