HEALTH TIPS

ಭಾರತ-ಮ್ಯಾನ್ಮಾರ್‌ ಗಡಿಯಲ್ಲಿ 6.1 ತೀವ್ರತೆ ಭೂಕಂಪ: ಕೋಲ್ಕತ್ತ ವರೆಗೆ ಕಂಪನ ಅನುಭವ

      ನವದೆಹಲಿ: ಶುಕ್ರವಾರ ಮುಂಜಾನೆ 5.30ರ ಸಮಯದಲ್ಲಿ ಮ್ಯಾನ್ಮಾರ್-ಭಾರತದ ಗಡಿ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

       ಭಾರತದ ಐಜ್ವಾಲ್‌ನಿಂದ 140 ಕಿ. ಮೀ. ದೂರದ ಪ್ರದೇಶದ 12 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭಾರತದ ಭೂಕಂಪ ಮಾಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

        ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಪೂರ್ವ ಭಾರತದ ಕೋಲ್ಕತ್ತದವರೆಗೆ ಭೂಕಂಪನದ ಅನುಭವವಾಗಿದೆ ಎಂದು 'ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌'ನ ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ. ಅಲ್ಲದೇ ಹಲವು ಟ್ವಿಟರ್‌ ಬಳಕೆದಾರರು ತಮಗೆ ಭೂಕಂಪನದ ಅನುಭವವಾಗಿದ್ದಾಗಿಯೂ ಪೋಸ್ಟ್‌ ಹಾಕಿದ್ದಾರೆ.

       ಈಶಾನ್ಯ ಭಾರತದ ರಾಜ್ಯಗಳು ಮತ್ತು ಬಾಂಗ್ಲಾದೇಶದ ಪ್ರಮುಖ ನಗರಗಳಲ್ಲಿ ಕಂಪನಗಳು ಸಂಭವಿಸಿವೆ ಎಂದು ಭೂಕಂಪ ಮಾಪನ ಶಾಸ್ತ್ರ ವಿಭಾಗವೂ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries