ತಿರುವನಂತಪುರ: ಶಾಲೆಗಳ ಕರ್ತವ್ಯ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ನಿನ್ನೆ ಸಭೆಸೇರಿ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸಂಜೆಯವರೆಗೆ ವಿಸ್ತರಿಸುವ ಕುರಿತು ಚರ್ಚೆ ನಡೆದಿದೆ.
ಪ್ರಸ್ತುತ ಶಾಲೆಗಳ ಕರ್ತವ್ಯ ಸಮಯ ಮಧ್ಯಾಹ್ನದವರೆಗಿದೆ. ಗುರುವಾರ ನಡೆದ ಸಭೆಯಲ್ಲಿ ಡಿಸೆಂಬರ್ 1ರಿಂದ ಶಾಲಾ ಅವಧಿಯನ್ನು ಒಂದೇ ರೀತಿ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿರುವುದರಿಂದ ಪಾಠ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕರು ಸಭೆಯಲ್ಲಿ ದೂರಿದ್ದರು.
ನಿನ್ನೆಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲು ವಿಸ್ಕøತ ಚರ್ಚೆ ನಡೆದಿದೆ. ಜೊತೆಗೆ, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇದೆ. ಹೆಚ್ಚಿನ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ. ಇದರಿಂದ ತೊಂದರೆಯಾಗುತ್ತದೆ ಎಂದು ಶಿಕ್ಷಕರೂ ಅಭಿಪ್ರಾಯಪಡುತ್ತಾರೆ.
ಪ್ಲಸ್ ಒನ್ ಸೀಟು ಕೊರತೆ ನೀಗಿಸಲು ಏಳು ಜಿಲ್ಲೆಗಳಲ್ಲಿ 65 ತಾತ್ಕಾಲಿಕ ಬ್ಯಾಚ್ ಹಂಚಿಕೆ ಸಮಸ್ಯೆಯೂ ನನೆ ಚರ್ಚೆಯಾಗಿದೆ. ಮಲಪ್ಪುರಂ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಬ್ಯಾಚ್‍ಗಳಿಗೆ ಹೆಚ್ಚಿನ ಬೇಡಿಕೆಯಿದೆ. ತ್ರಿಶೂರ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಕೆಲವು ಬ್ಯಾಚ್‍ಗಳ ಅಗತ್ಯವಿದೆ. ಮಂಗಳವಾರ ಪ್ರಕಟವಾದ ಎರಡನೇ ಪೂರಕ ಹಂಚಿಕೆಯ ನಂತರ, ಮಲಪ್ಪುರಂನಲ್ಲಿ 5491, ಪಾಲಕ್ಕಾಡ್ನಲ್ಲಿ 2002 ಮತ್ತು ಕೋಝಿಕ್ಕೋಡ್ ನಲ್ಲಿ 2202 ಅಭ್ಯರ್ಥಿಗಳು ಪ್ರವೇಶ ಪಡೆಯಲಿದ್ದಾರೆ.
ನಿನ್ನೆಯ ಚರ್ಚೆಯ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.




