HEALTH TIPS

ದೆಹಲಿ ಮೆಟ್ರೋದ ಪಿಂಕ್ ಲೈನ್‌ನಲ್ಲಿ ಚಾಲಕರಹಿತ ರೈಲು ಸಂಚಾರಕ್ಕೆ ಹಸಿರು ನಿಶಾನೆ

            ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಎಸ್ ಪುರಿ ಮತ್ತು ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಗುರುವಾರ ದೆಹಲಿ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚಾರಕ್ಕೆ(UTO)ಹಸಿರು ನಿಶಾನೆ ತೋರಿಸಿದರು.

            ಈ ಸಂದರ್ಭದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಮತ್ತು ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಗು ಸಿಂಗ್ ಉಪಸ್ಥಿತರಿದ್ದರು.

            ಈ ಸಂದರ್ಭದಲ್ಲಿ ಮಾತನಾಡಿದ ಪುರಿ, ದೆಹಲಿ ಮೆಟ್ರೋ ವಿಶ್ವದ ಅತಿದೊಡ್ಡ ಚಾಲಕ ರಹಿತ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ಇಂತಹ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2020ರಲ್ಲಿ ದೆಹಲಿ ಮೆಟ್ರೋದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು ಎಂದರು.

           ಇದೇ ವೇಳೆ ದೆಹಲಿ ಮೆಟ್ರೋ ಮತ್ತು ಎನ್‌ಸಿಆರ್‌ನ ಜನರನ್ನು ಅಭಿನಂದಿಸಿದ ಸಚಿವರು, ಕೈಗೆಟುಕುವ ಅಂತರ್ಗತ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಯತ್ತ ದೇಶದ ಪ್ರಯಾಣದಲ್ಲಿ ದೆಹಲಿ ಮೆಟ್ರೋ ನಮಗೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ನೀಡಿದೆ ಎಂದು ಹೇಳಿದರು.

             96.7 ಕಿಲೋಮೀಟರ್‌ಗಳ ಬೃಹತ್ ಡ್ರೈವರ್‌ಲೆಸ್ ನೆಟ್‌ವರ್ಕ್‌ನೊಂದಿಗೆ ದೆಹಲಿ ಮೆಟ್ರೋ ಈಗ ಡ್ರೈವರ್‌ಲೆಸ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುವ ವಿಶ್ವದ ನಾಲ್ಕನೇ ಅತಿದೊಡ್ಡ ನೆಟ್‌ವರ್ಕ್ ಆಗಿದೆ ಎಂದು ಪುರಿ ಹೇಳಿದರು. ಇದು ಡಿಎಂಆರ್‌ಸಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಹತ್ವದ ಸಂದರ್ಭವಾಗಿದೆ. ಕೋವಿಡ್ ಪೂರ್ವದಲ್ಲಿ ದೆಹಲಿ ಮೆಟ್ರೋ ದಿನಕ್ಕೆ 65 ಲಕ್ಷ ಗರಿಷ್ಠ ಪ್ರಯಾಣಿಕರನ್ನು ಹೊಂದಿತ್ತು ಮತ್ತು ಶೀಘ್ರದಲ್ಲೇ ನಾವು ಆ ಅಂಕಿಅಂಶವನ್ನು ಮೀರುತ್ತೇವೆ ಎಂದರು.

            ಎಂಹೆಚ್​ಯುಎ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಮಾತನಾಡಿ, ಇದು ಉತ್ತರದಿಂದ ದಕ್ಷಿಣ ದೆಹಲಿಗೆ ಸಂಪರ್ಕಿಸುವ ಪ್ರಮುಖ ಮೆಟ್ರೋ ಮಾರ್ಗವಾಗಿದೆ. ಈ ಚಾಲಕ ರಹಿತ ತಂತ್ರಜ್ಞಾನದಿಂದ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣವಾಗಲಿದೆ. ಈ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಬಟನ್ ಕ್ಲಿಕ್ ಮಾಡುವ ಮೂಲಕ ಮೆಟ್ರೋ ಓಡಿಸಬಹುದು ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries