ಬೆಂಗಳೂರು: ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರಾ, ಮತ್ತೊಮ್ಮೆ ತಮ್ಮ ಬಗೆಗೆ ಹರಿದಾಡಿರುವ ಕೋಟ್ ಒಂದರ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
0
samarasasudhi
ನವೆಂಬರ್ 22, 2021
ಬೆಂಗಳೂರು: ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರಾ, ಮತ್ತೊಮ್ಮೆ ತಮ್ಮ ಬಗೆಗೆ ಹರಿದಾಡಿರುವ ಕೋಟ್ ಒಂದರ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಅದೇ ರೀತಿಯಲ್ಲಿ, ಆನಂದ್ ಮಹೀಂದ್ರಾ ಅವರ ಹೆಸರಿನಲ್ಲೂ ನಕಲಿ ಹೇಳಿಕೆಯೊಂದು ಹರಿದಾಡಿದೆ.
ಇದನ್ನು ಗಮನಿಸಿದ ಅವರು, ಕೋಟ್ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್‌ಶಾಟ್ ಆನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜತೆಗೆ, ಇಂತಹ ಹಲವಾರು ನಕಲಿ ಕೋಟ್ ಇರುವ ಪೋಸ್ಟ್‌ಗಳು ಇದ್ದು, ಅವುಗಳನ್ನು ನಾವೇ ಸ್ವತಃ ಹೇಳಿರುವಂತೆ ಬಿಂಬಿಸಲಾಗುತ್ತಿದೆ. ಆದರೆ ಅವುಗಳಿಗೂ ನಮಗೂ ಸಂಬಂಧವೇ ಇರುವುದಿಲ್ಲ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ಅಲ್ಲದೆ, ಸೂಕ್ತ ಕಾನೂನು ಕ್ರಮದ ಎಚ್ಚರಿಕೆಯನ್ನೂ ಆನಂದ್ ಮಹೀಂದ್ರಾ ನೀಡಿದ್ದು, ನಮ್ಮದಲ್ಲದ ಹೇಳಿಕೆಗಳನ್ನು ಪ್ರಕಟಿಸಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದಿದ್ದಾರೆ.