HEALTH TIPS

ದೋಕಲಾಗೆ ಹೊಂದಿಕೊಂಡಂತೆ ಭೂತಾನ್‌ನಲ್ಲಿ ಹೊಸ ಗ್ರಾಮಗಳನ್ನು ನಿರ್ಮಿಸಿರುವ ಚೀನಾ

              ನವದೆಹಲಿ: ಕಳೆದ ಒಂದು ವರ್ಷದಲ್ಲಿ ದೋಕಲಾ ಬಳಿಯ ಭೂತಾನ್ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮಗಳನ್ನು ನಿರ್ಮಿಸಿರುವುದು ಉಪಗ್ರಹ ಚಿತ್ರಗಳು ಬಹಿರಂಗವಾಗಿದೆ.

           ಮೇ 2020 ಮತ್ತು ನವೆಂಬರ್ 2021ರ ನಡುವೆ ಸುಮಾರು 100 ಚ.ಕಿ.ಮೀ.ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಾಲ್ಕು ಗ್ರಾಮಗಳನ್ನು ನಿರ್ಮಿಸಿರುವುದು ಉಪಗ್ರಹ ಚಿತ್ರಗಳಿಂದ ಗೊತ್ತಾಗಿದೆ.

             ಪೂರ್ವ ಲಡಾಖ್ ಮತ್ತು ಸಿಕ್ಕಿಂ ವಲಯದ ಅನೇಕ ಸ್ಥಳಗಳಲ್ಲಿ ಚೀನಾದ ಸೇನೆ ಭಾರತದ ಭೂಪ್ರದೇಶಗಳಿಗೆ ಅತಿಕ್ರಮಣ ಮಾಡಿದ್ದ ಸಮಯದಲ್ಲೇ ಹಳ್ಳಿಗಳ ನಿರ್ಮಾಣವೂ ಆಗಿದೆ.

ಭಾರತ-ಚೀನಾ ಸೇನೆಗಳ 70 ದಿನಗಳ ಮುಖಾಮುಖಿಯ ಕಾರಣದಿಂದಾಗಿ ದೋಕಲಾ 2017ರಲ್ಲಿ ಚರ್ಚೆಯಲ್ಲಿತ್ತು. ಈ ಪ್ರದೇಶದ ಮೇಲೆ ಮುತ್ತಿಗೆ ಹಾಕಿದ್ದ ಚೀನಿ ಸೈನಿಕರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದರು.

               ಭಾರತ, ಚೀನಾ ಮತ್ತು ಭೂತಾನ್‌ಗಳು ಸಂಧಿಸುವ ಪರ್ವತ ಮತ್ತು ಕಣಿವೆಯನ್ನು ಒಳಗೊಂಡಿರುವ 100 ಚ.ಕಿ.ಮೀ ಪ್ರದೇಶವೇ ದೋಕಲಾ. ಇದು ಟಿಬೆಟ್‌ನ 'ಚುಂಬಿ' ಕಣಿವೆ, ಭೂತಾನ್‌ನ 'ಹಾ' ಕಣಿವೆ ಮತ್ತು ಸಿಕ್ಕಿಂನಿಂದ ಆವೃತವಾಗಿದೆ. 2017ರಲ್ಲಿ ದೋಕಲಾ ಚೀನಾ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತ್ತು. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ವಿಚಾರದಲ್ಲಿ ಭೂತಾನ್ ಮತ್ತು ಚೀನಾ ನಡುವೆ ಗಡಿ ವಿವಾದವಿದೆ. ಇದರಲ್ಲಿ ಭಾರತಕ್ಕೆ ಯಾವುದೇ ಸಂಬಂಧಗಳಿಲ್ಲ ಎಂದು ಚೀನಾ ವಾದಿಸಿತ್ತು.

                 ಆದರೆ, ಚೀನಾದ ಈ ವಾದ ನಿರಾಕರಿಸಿದ್ದ ಭಾರತವು ದೋಕಲಾ ಬಳಿ 73 ದಿನ ಸೇನೆಯನ್ನು ನಿಯೋಜಿಸಿತ್ತು.

           ಕಳೆದ ತಿಂಗಳು, ಚೀನಾ ಮತ್ತು ಭೂತಾನ್ ತಮ್ಮ ಗಡಿ ವಿವಾದಗಳನ್ನು ಪರಿಹರಿಸಲು ಮೂರು-ಹಂತದ ಮಾರ್ಗಸೂಚಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಬೆಳವಣಿಗೆಯನ್ನು ಗಮನಿಸಿರುವುದಾಗಿ ಭಾರತ ಹೇಳಿದೆ.

             ಭೂತಾನ್ ಮತ್ತು ಚೀನಾ ನಡುವಿನ ಗಡಿ ಮಾತುಕತೆಗಳು 1984 ರಲ್ಲಿ ಪ್ರಾರಂಭವಾಗಿದ್ದು, 24 ಸುತ್ತಿನ ಗಡಿ ಮಾತುಕತೆಗಳು ಮತ್ತು ತಜ್ಞರ ಮಟ್ಟದ 10 ಸುತ್ತಿನ ಸಭೆಗಳು ನಡೆದಿವೆ.

ಆರಂಭದಲ್ಲಿ, ಚೀನಾ ಅತಿಕ್ರಮಣವನ್ನು ಭೂತಾನ್ ಹಲವು ಬಾರಿ ಆಕ್ಷೇಪಿಸಿತ್ತು. ಸದ್ಯ ಭೂತಾನ್‌ನಲ್ಲೇ ಚೀನಾ ಹಳ್ಳಿಗಳನ್ನು ನಿರ್ಮಾಣ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries