HEALTH TIPS

ದೇಶವನ್ನು ಅವಮಾನಿಸುವ ಕಾರ್ಟೂನ್ ಗೆ ಕೇರಳ ಲಲಿತಕಲಾ ಅಕಾಡೆಮಿ ಪ್ರಶಸ್ತಿ; ಪ್ರಧಾನಿಗೆ ದೂರು

                                               

              ಆಲಪ್ಪುಳ: ದೇಶವನ್ನು ಅವಮಾನಿಸುವ ವ್ಯಂಗ್ಯಚಿತ್ರಕ್ಕೆ ಕೇರಳ ಲಲಿತಕಲಾ ಅಕಾಡೆಮಿ ಪ್ರಶಸ್ತಿ ನೀಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣನ್ ವರೇನಿಕಲ್ ಅವರು ದೂರು ನೀಡಿದ್ದಾರೆ. ದೂರು ಪರಿಶೀಲನೆಗಾಗಿ ವಿವಿಧ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ.

                ಭಾರತಕ್ಕೆ ಅವಮಾನ ಮಾಡುವಂತೆ ಬಹುಮಾನಿತ ಕಾರ್ಟೂನ್ ಬರೆಯಲಾಗಿದೆ ಎಂದು ದೂರಿರುವರು. ಜನ ಪಾವತಿಸಿದ ತೆರಿಗೆ ಹಣದಲ್ಲಿ ದೇಶಕ್ಕೆ ಅವಮಾನ ಮಾಡುವ ಕಾರ್ಟೂನ್ ಪ್ರಶಸ್ತಿ ನೀಡಿರುವುದು ತನಗೆ ಅತೀವ ಸಂಕಟ ತಂದಿದೆ ಎಂದು ದೂರಿದ ಬಳಿಕ ಜಾನ್  ಪ್ರತಿಕ್ರಿಯಿಸಿದರು. ಲಲಿತಕಲಾ ಅಕಾಡೆಮಿಯ ಕೆಲಸ ಹೇಯಕರ. ಭಾರತದ ಘನತೆಗೆ ಮಸಿ ಬಳಿಯುವ ರಾಜಕೀಯ ಲಾಭದ ಷಡ್ಯಂತ್ರದ ಭಾಗವಾಗಿ ಈ ಕಾರ್ಟೂನ್ ಬಿಡಿಸಲಾಗಿದೆ. ಈ ಭಾವವೇ ಈ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ ಬರಲು ಕಾರಣವಾಯಿತು ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

               ಕೇರಳದಲ್ಲಿ ಇಂತಹ ದೂರು ನೀಡಿದರೆ  ಕಸದ ಬುಟ್ಟಿಗೆ ಸೇರುತ್ತದೆ. ಈ ಬಗ್ಗೆ ಪ್ರಧಾನಿಯವರಿಗೆ ಚೆನ್ನಾಗಿ ಗೊತ್ತಿರುವುದರಿಂದ ಅವರಿಗೇ ಪತ್ರ ಕಳುಹಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಘಟನೆ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಧಾಕೃಷ್ಣನ್ ವಾರೆನಿಕಲ್ ತಿಳಿಸಿದ್ದಾರೆ.

               ಕೊರೋನಾ ಗ್ಲೋಬಲ್ ಮೆಡಿಕಲ್ ಶೃಂಗಸಭೆಯಲ್ಲಿ ವಿಶ್ವದ ಇತರ ಭಾಗಗಳೊಂದಿಗೆ ಭಾರತವನ್ನು ಪ್ರತಿನಿಧಿಸುವ ಹಸುವನ್ನು ಬಿಂಬಿಸುವ ಕಾರ್ಟೂನ್‍ಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿಯನ್ನು ನೀಡಿತ್ತು. ವ್ಯಂಗ್ಯಚಿತ್ರಕಾರ ಅನಿಲ್ ರಾಧಾಕೃಷ್ಣನ್ ಮತ್ತು ಪ್ರಶಸ್ತಿ ವಿಜೇತ ಅಕಾಡೆಮಿ ವಿರುದ್ಧ ಇನ್ನೂ ಪ್ರತಿಭಟನೆಗಳು ನಡೆಯುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries